ಪೋಲಾಗದಿರಲಿ ನೀರು

ಉರಿವ ಬಿಸಿಲು, ಬಟ್ಟ ಬಯಲು ನಿತ್ಯ ನರಕ ಯಾತನೆ
ಊರ ಕೇರಿ ದೂರಸಾಗಿ ನಿನ್ನ ಬಯಸಿ ಬಂದೆನೆ,
ಭೂಗರ್ಭದಿ ಬಸಿವೆ ನಿನ್ನ ಕುಡಿಯದೆ ತಣಿವೆನೆ?
ಜೀವಬಲ ಜೀವಜಲ ನೀ ಅಮೃತಧಾರೆನೇ!
ಒಂದು ಹನಿಗೆ ನೂರುದನಿ ಜೀವರಾಶಿಗೆ ನೀಧಣಿ
ಪೋಲಾಗದೆ ಉಳಿಸಿಕೊಳುವ ಹೊಣೆಗೆ ನಾವಾಗುವ ಅಣಿ.
ಬಿಟ್ಟು ಕೆಟ್ಟೆವು ಪ್ರೀತಿಸದೇ ಪ್ರಕೃತಿಯನ್ನೇ
ಹನಿಗಳಿಂದು ಇಂಗುತ್ತಿಲ್ಲ, ಸೇರದೇ ಮಣ್ಣನ್ನೇ
ಕಾಂಕ್ರೀಟ್ ಕಾಡಲಿ ಅಟ್ಟಹಾಸದಲ್ಲಿ ನಗುತಿಹೆವು ಗಹಗಹನೆ!.
ಈಗೆಯೇ ಎಲ್ಲ ಬತ್ತಿಸಿದರೆ, ನಮ್ ಮುಂದಿನವರಿಗೆ ಉಳಿಯುವುದು ಏನೇ?

ಅ. ದೇ. ಪ್ರಲ್ಹಾದಸುತ, ಕಲಬುರಗಿ