ಸರ್ವಧರ್ಮ ಸಮಭಾವ ಎಂದು ಭಾವೈಕ್ಯ ಮೆರೆದ ನಾಗಣಸೂರಿನ ತುಪ್ಪಿನ ಮಠ
ಜತ್ತ
ವಿಶ್ವದಾದ್ಯಂತ ರಮ್ಮಾನ ಇದು ಮುಸಲ್ಮಾನರ ಪ್ರಮುಖ ಹಬ್ಬ ಎಂದು ಪರಿಗಣಿಸಲಾಗುತ್ತೆ. ಈ ಹಬ್ಬದಂದು ಅವರು ಬಗೆ ಬಗೆಯ ತಿಂಡಿ ತಿನುಸುಗಳನ್ನ ಮಾಡಿ, ಪ್ರಮುಖವಾಗಿ ಅವರ ಈ ರಮ್ಹಾನ ಹಬ್ಬದ ವಿಶೇಷವಾದ ಶಿರಖುರ್ಮಾ ಮಾಡಿ ತಮ್ಮ ಸಂಬಂಧಿಕರಿಗೆ ಸ್ನೇಹಿತರಿಗೆ, ನೆರೆಹೊರೆಯವರಿಗೆ ಉಣಬಡಿಸಿ ತಮ್ಮ ಹಬ್ಬವನ್ನು ಆಚರಿಸುತ್ತಾರೆ. ಆದರೆ ಮಹರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ನಾಗಣಸೂರಿನ ತುಪ್ಪಿನ ಮಠದಲ್ಲಿ ಪ್ರತಿ ರಮಜಾನ ಹಬ್ಬದಂದು ಮುಸಲ್ಮಾನ ಭಕ್ತರಿಗೆ ಹೊಳಿಗೆ ತುಪ್ಪಿನ ಪ್ರಸಾದ ನೀಡಿ ಸಮಾನತೆಯಲ್ಲಿ ಐಕ್ಯತೆ ಮೆರೆಯುತ್ತದೆ. ಶ್ರೀ ಜಗದ್ಗುರು ಬಸವಲಿಂಗ ಮಹಾಶೀವಯೋಗಿಗಳವರ ತುಪ್ಪಿನಮಠದಲ್ಲಿ ಮುಸಲ್ಮಾನ ಭಕ್ತರು ತಮ್ಮ ಹಬ್ಬದ ಪ್ರಸಾದವನ್ನು ತಂದು ಊರಿನ ಜನರಿಗೆ ಮತ್ತು ತಮ್ಮ ಬಳಗದವರನ್ನು ಕರೆತಂದು ನಾವೆಲ್ಲರು ಶ್ರೀ ಜಗದ್ಗುರು ಬಸವಲಿಂಗ ಶಿವಯೋಗಿಗಳವರ ಭಕ್ತರು ನಮಗೆ ಯಾವ ಭೇದ ಭಾವ ಇಲ್ಲ ನಾವೆಲ್ಲರು ಒಂದೇ ಎಂದು ಹೇಳಿಕೊಂಡು ಶ್ರೀ ಮಠದಲ್ಲಿ ರಮಜಾನ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆ ಶ್ರೀ ಮಠದ ನೂತನ ಪೀಠಾಧಿಪತಿಗಳಾದ ಹಿಮಾಲಯಯೋಗಿ ಡಾ ಅಭಿನವ ಬಸವಲಿಂಗ ಮಹಾಸ್ವಾಮಿಗಳು ಚಾಲನೇ ನೀಡಿ ಪ್ರತಿಯೊಬ್ಬ ಭಕ್ತರಿಗೆ ತಾವೇ ಸ್ವತಃ ಪ್ರಸಾದವನ್ನು ನೀಡುತ್ತಾರೆ. “ಕಾಯ ಆಳಿದರು ಕಿರ್ತಿ ಅಳಿಯದು” ಎಂಬ ಗುರುವಾಣಿಯು ಮನದಲ್ಲಿ ಸದಾ ಸ್ಮರಿಸುತ್ತಾ ಸಮಾಜದ ಎಳಿಗೆಗಾಗಿ ಸದಾ ಹಸನ್ಮುಖದಿಂದ ತಮ್ಮ ಕಾಯಕ ಮಾಡುತ್ತಿರುವ ಡಾ ಅಭಿನವ ಬಸವಲಿಂಗ ಮಹಾಸ್ವಾಮಿಗಳು ಜಾತಿ ಜಮಾತಿ ಎಂಬುದು ನಾವು ಮಾಡಿಕೊಂಡಿರುವುದು ಅಷ್ಟೇ ಒಳ್ಳೆಯದು ಮಾಡುವವರಿಗೆ ಯಾವ ಜಾತಿ ಜಮಾತಿ ಇರುವುದಿಲ್ಲ .ಮುಸಲ್ಮಾನರಲ್ಲಿ ಒಳ್ಳೆಯವರು ಇದ್ದಾರೆ ಅವರ ಒಳ್ಳೆಯತನವನ್ನು ನೊಡೊಣ ಅವರೊಂದಿಗೆ ಅಣ್ಣ- ತಮ್ಮಂದಿಯರ ತರ ಇರೊಣ ಎಂದು ಹೇಳಿದ್ದರು. ಸರ್ವ ಧರ್ಮ ಸಮಭಾವ ನಾವೇಲ್ಲರು ಒಂದೆ ಇರುವೇವು, ದೇವರು ಒಬ್ಬನೆ ಆದರೆ ಆತನಿಗೆ ನಾಮಗಳು ಹಲವು ಇವೇ ಎಂದು ತಿಳಿಸಿದರು. ಮಹಾರಾಷ್ಟ್ರ & ಕರ್ನಾಟಕದ ಗಡಿಭಾಗದ ಮೇಲೆ ನಡೆಯುವ ಒಂದು ದೊಡ್ಡ ಜಾತ್ರೆ ಶ್ರೀ ಜಗದ್ಗುರು ಬಸವಲಿಂಗ ಶಿವಯೋಗಳವರ ಪೂಣ್ಯಸ್ಮರಣೋತ್ಸವದಲ್ಲಿ ಸುಮಾರು 4 ರಿಂದ 5 ಲಕ್ಷ ಭಕ್ತರು ಬರುತ್ತಾರೆ. ಆಗ ಅವರಿಗೆಲ್ಲ ಪ್ರಸಾದ ನೀಡುವಲ್ಲಿ ಮುಸಲ್ಮಾನ ಭಕ್ತರು ಸಹ ಭಾಗಿಯಾಗಿ ತುಪ್ಪಿನಮಠದ ತುಪ್ಪಿನ ಜಾತ್ರೆಗೆ ಅವರದು ಒಂದು ಮಹತ್ವದ ಸೇವೆ ಇರುತ್ತದೆ ಎಂದು ಹೇಳಿದರು. ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ ಮನೆಗಳಲ್ಲಿ ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ ಇದುವೆ ಸಮಾನತೆ ಎಂದು ಹೇಳಿರುವ ಪೂಜ್ಯ ಶ್ರೀಗಳವರ ಮಾತು ಅಲ್ಲಿರುವ ಮುಸಲ್ಮಾನರ ಕಣ್ಣಲಿ ನೀರು ತರಿಸಿತು.

~ ದಯಾನಂದ ಪಾಟೀಲ