ಸಿದ್ಧನಾಥದ ಶ್ರೀ ಸಿದ್ಧೇಶ್ವರ

ನೋಡ ಬನ್ನಿ ಶ್ರೀ ಸಿದ್ಧೇಶ್ವರ ಮಂದಿರ
ನೋಡಲೆಷ್ಟು ಅತಿ ಸುಂದರ
ಹನ್ನೆರಡನೆಯ ಶತಮಾನದ ದೇವಾಲಯ
ಕಲ್ಲುಗಳಲ್ಲಿ ಕೆತ್ತಿದ ಶಿವಾಲಯ

ನೋಡ ಬನ್ನಿ ಭಕ್ತರೇ
ಶ್ರೀ ಸಿದ್ಧೇಶ್ವರನ ಮಹಿಮಯ
ಕಾಣಲು ಬನ್ನಿ ಭಕ್ತರೇ
ಅಪರೂಪದಲ್ಲಿಯ ಅಪರೂಪದ ದೇವಾಲಯ

ದರ್ಶನ ಪಡೆದರೆ ನಮ್ಮೀ ಜೀವನ ಪಾವನವು
ಭಕ್ತಿಯಿಂದ ತಣಿಯುವುದು ಮೈ ಮನವು
ಶತ ಶತಮಾನಗಳಿಂದ ಬೆಳಗುತಿಹವು
ಆರದ ಎಣ್ಣೆಯ ಹಣತೆಗಳು
ಅವುಗಳ ದರುಶನದಿಂದ
ಪಾವನವಾಗುವವು ನಮ್ಮ ಕಂಗಳು

ಒಮ್ಮೆ ನೋಡಲು ಬನ್ನಿ
ಸಿದ್ಧನಾಥ ಶ್ರೀ ಸಿದ್ಧೇಶ್ವರನ ದೇವರನ್ನ

  • ರಚನೆ –
    ಶ್ರೀ. ದಯಾನಂದ ಪಾಟೀಲ
    ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ, ಮಹಾರಾಷ್ಟ್ರ