ಯುಗದ ಆದಿ ಯುಗಾದಿ
ಹೊಸ ಪರ್ವದ ಹೊಸ್ತಿಲಲಿ
ಹೊಸ ಭಾವನೆಗಳು ಬೆಸೆಯುತಲಿ
ಮಾವು ಬೇವಿನ ಮಿಶ್ರಣ ಸವಿದು
ಆಚರಿಸುವ ಹಬ್ಬ
ನೋವುಗಳೆಲ್ಲ ಬದಿಗಿರಿಸಿ
ವಿರಸಗಳೆಲ್ಲ ದೂರ ಸರಿಸಿ
ನವ ವಸಂತದ ಕದ ತೆರೆದು
ಸ್ವಾಗತಿಸುವ ಹಬ್ಬ
ವಸಂತ ಗಾನ ಮನದಿ ಮೀಟಿ
ಕೋಗಿಲೆಗಳ ಮಾಧುರ್ಯ ಹರಡಿ
ಸಂದೇಶ ಸಾರುವ ಹಕ್ಕಿಗಳಿಂದ
ಚೈತನ್ಯ ತುಂಬುವ ಹಬ್ಬ
ಕಷ್ಟ ನಷ್ಟ ಮುಗಿಯಲಿಂದು
ಮನದ ಇಷ್ಟ ಈಡೇರಲಿಂದು
ಕಣ್ತುಂಬಿಕೊಂಡ ಯುಗಾದಿಯ
ಭಾವೈಕ್ಯತೆಯ ಹಬ್ಬ
ರೈತರಿಂದ ಬೆಳೆದ ಪೈರು
ಕಣಜ ತುಂಬ ಹೊನ್ನತೇರು
ಸುಗ್ಗಿಯ ಹರ್ಷ ಹಂಚಿಕೊಂಡು
ಸಂಭ್ರಮಿಸುವ ಹಬ್ಬ
ಯುಗದ ಆದಿ ಯುಗಾದಿಯಂದು
ಹೊಂಗೆ ಮಾವು ಬೇವಿನ ಸೋಬಗು
ಚಿಗುರೊಡೆದು ಹೂಕಾಯಿ ಬಿಟ್ಟು
ಕೈ ಬೀಸಿ ಕರೆವ ಹಬ್ಬ
ಯುಗಾದಿ ಹಬ್ಬದ ಶುಭಾಶಯಗಳು…. 💐💐
ಶ್ರೀಮತಿ ಸುಲೋಚನಾ ಮಾಲಿಪಾಟೀಲ