ವಿಶ್ವ ಕವಿತೆ(ಕಾವ್ಯ) ದಿನ
ಕವಿತೆಗೊಂದು ದಿನ
ಕಾವ್ಯಗೊಂದು ಮನ
ಕಥೆಗೊಂದು ಕವನ
ವಣಿ೯ಸಿ ಬಣ್ಣಿಸುವ ದಿನ
ಬರಹಕ್ಕೆ ಕರಗದಿರುವ ಮನ
ಸಾವಿರ ದಾಚೆಯ ನೋವು ಕಳೆದ
ಕವಿತೆ
ಆಗಲಿ ನಿನಗೊಂದು ದಿನ ಕಾವ್ಯ
ಶ್ರೇಷ್ಠತೆ ಬೆಳಗಲಿ
★★★★★★★
ಬೆಳ್ಳಗಿರುವದೆಲ್ಲಾ ಹಾಲಲ್ಲ
ಕಣ್ಣಿಗೆ ಕಾಣುವುದೆಲ್ಲಾ ನಿಜವಲ್ಲ
ಮನಸಿನ ಕನ್ನಡಿ ಒಡೆದು ಹೋಗದಲ್ಲ
ಮನಸ್ಸು ಬೆಸೆಯುವ ಕೊಂಡಿ ಆಗಬೇಕು
ಕಳಚಿ ಬಿದ್ದು ನಗುವುದು ಅಲ್ಲ
ಮಾನವೀಯತೆ ಮನುಷ್ಯನ ನಿಜಧಮ೯ ಅಲ್ವಾ
★★★★★★★
ಹಲವಾರು ವರ್ಷಗಳ ತಪಸ್ಸು
ಮಾಹಾದೇವ ನಿನ್ನ ಕಾಣುವ ಹುಮ್ಮಸ್ಸು
ಬೆರಳೆಣಿಕೆ ಅಷ್ಟೇ ಜೀವನದ ಆಯಸ್ಸು
ಬಣ್ಣದ ಆಟ ನಮ್ಮ ಜೀವನದ ಕನಸು
ಯಾರಿಲ್ಲ ಇಲ್ಲಿ ಶಾಶ್ವತ ಅನ್ನುವ ಸತ್ಯ
ಫೇಮಸ್ಸು
ಆದರೆ ಗುರು ಶಿಷ್ಯರ ಸಂಬಂಧ ಯಶಸ್ಸು
★★★★★★★
ನೂರ್ಕಾಲ ಬಾಳಲಿ ಅಂತ ಹೇಳುವುದು ವಾಡಿಕೆ
ಮೂರು ದಿನದ ಸಂತೆ ಎನ್ನುವುದು
ಹೇಳಕೆ
ಕರೆದಾಗ ಹೋಗುವುದು ಸತ್ಯ ಸಂಚಿಕೆ
ಬಿಟ್ಟು ಹೋದಾಗ ಉಳಿಯುವುದು ಮಾತ್ರ ನಂಬಿಕೆ
ವಾಸ್ತವ ಅರಿತು ನಾಸ್ತಿಕ ಮಸ್ತಕ ತಿಳಿದು ನಡೆಯುವನೆ ಜಾಣ
ರಚನೆ: ಕು. ಕವಿತಾ ಎಂ. ಮಾಳಿ ಪಾಟೀಲ