ಬಹುಮುಖ ಪ್ರತಿಭೆಯ ಹರಿಣಿ ಎಂ. ಶೆಟ್ಟಿಯವರಿಗೆ ರಾಜ್ಯಮಟ್ಟದ ಕವನ ಸ್ಪರ್ಧೆಗಳಲ್ಲಿ ಮೂರು ಬಹುಮಾನಗಳು
ಕರ್ನಾಟಕ, ಉಡುಪಿ ಜಿಲ್ಲೆಯ ಕಾಪು ಕರಂದಾಡಿ ಭಟ್ಟಸ್ಥಾನದ ಶ್ರೀಮತಿ ದಿ. ರಾಧಾ ಶಿವರಾಮ್ ಶೆಟ್ಟಿಯವರ ಪುತ್ರಿ ಹಾಗೂ ಕಾಪು ಮುಳೂರು ಬಿಕ್ರಿಗಿತ್ತು ಮತ್ತು ದೇವಸ್ಯ ಕೊಡೆತೂರು ಗುತ್ತು ದಿ. ಮಲ್ಲಿನಾಥ್ ಜೆ. ಶೆಟ್ರ ಪತ್ನಿ ಶ್ರೀಮತಿ ಹರಿಣಿ ಎಂ. ಶೆಟ್ಟಿಯವರು ಮುಂಬಯಿ ಘಾಟ್ ಕೋಪರ್ ಮನಾಲಿ ಆರ್ಟ್ಸ್’ನ ಮಾಲಕಿ
ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟೂರಿನಲ್ಲಿ, ಪ್ರೌಢ ಶಿಕ್ಷಣ ಕಾಪು ಮಹಾದೇವಿ ಹೈಸ್ಕೂಲ್ ನಲ್ಲಿ, ಬಿ. ಎ. ಪದವಿಯನ್ನು ಎಂ. ಎಸ್. ಆರ್. ಎಸ್. ಕಾಲೇಜ್ ಶಿರ್ವದಲ್ಲಿ ಪಡೆದಿರುವರು.
ಹೊಟ್ಟೆಪಾಡಿಗಾಗಿ ಜನ್ಮಭೂಮಿಯನ್ನು ಬಿಟ್ಟು ಕರ್ಮಭೂಮಿಯಾದ ಮುಂಬೈಗೆ ಆಗಮಿಸಿದ ಇವರು ಜೀವನದ ಏಳು ಬೀಳುಗಳನ್ನು ಕಂಡವರು. ಬಾಲ್ಯದಲ್ಲಿಯೇ ನಾಟಕದಲ್ಲಿ ತುಂಬಾ ಆಸಕ್ತಿ ಇದ್ದ ಇವರು ಹುಟ್ಟೂರಿನಲ್ಲಿ ಹಲವು ನಾಯಕಿಯ ಪಾತ್ರದಲ್ಲಿ ಮಿಂಚಿದವರು. ಎಲ್ಲರ ಪ್ರೀತಿಗೆ ಪಾತ್ರರಾದವರು. ಸಂಸಾರ ತಾಪತ್ರದ ನಡುವೆ ಅದನ್ನೆಲ್ಲ ಬದಿಗೆ ಸರಿಸಿಟ್ಟವರು. ಕ್ರಮೇಣ ಬಂಟ ಸಂಘ ಮುಂಬೈಯ ಕುರ್ಲಾ ಭಾಂಡೂಪಿನ ಜೊತೆ ಕಾರ್ಯದರ್ಶಿಯಾಗಿ ಅಲ್ಲದೆ ಉಪಕಾರ್ಯಾಧ್ಯಕ್ಷೆಯಾಗಿ ಮೂರು ವರ್ಷ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಾಗ ಪತಿಯ ಸಹಕಾರವು ದೊರೆತಾಗ ತನ್ನ ಪ್ರತಿಭೆಯನ್ನು ಹೊರಹಾಕಲು ಪ್ರಯತ್ನಿಸಿದರು. ಎಂ.ಎಸ್.ಆರ್.ಎಸ್. ಅಲ್ಯೂಮಿನಿ ಎಸೋಸಿಯೇಶನ್ ಮತ್ತು ಬಂಟರ ಸಂಘದಲ್ಲಿ ಹಲವಾರು ನಾಟಕಗಳಲ್ಲಿ ನಾಯಕಿಯ, ವಿಭಿನ್ನ ಪಾತ್ರಗಳಲ್ಲಿ ಮಿಂಚಿರುವರು.
ಪ್ರಸ್ತುತ ಬಂಟರ ಸಂಘದ ಮಹಿಳಾ ವಿಭಾಗದ ಸಾಹಿತ್ಯ ವಿಭಾಗದ ಸಂಚಾಲಕಿಯಾಗಿದ್ದಾರೆ.
ಇತ್ತೀಚೆಗೆ 2024ರಲ್ಲಿ ರಾಜ್ಯಮಟ್ಟದ ಸ್ವರಚಿತ ಕವನ ವಾಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿ.ವಿ. ಕನ್ನಡ ಚಾನೆಲ್ ಮತ್ತು ಸಾಹಿತ್ಯ ವೇದಿಕೆ ವಿಜಯಪುರ ಇವರ ಸಹಯೋಗದ ಹಾಗೂ ಓಂ ಸಾಹಿತ್ಯ ಬಳಗ ಕರ್ನಾಟಕ ಇವರ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ ರಾಜ್ಯಮಟ್ಟದ ಜಡೆ ಕವನದಲ್ಲಿ ಮೆಚ್ಚುಗೆ ಬಹುಮಾನ.
ಹೀಗೆ ರಾಜ್ಯಮಟ್ಟದ ಮೂರು ಬಹುಮಾನಗಳನ್ನು ಗೆದ್ದುಕೊಂಡಿರುವರು.
ಇತ್ತೀಚಿಗೆ ಇವರ ಬಹುಮುಖ ಸಾಧನೆಯನ್ನು ಗುರುತಿಸಿದ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ.) ಬೆಳಗಾವಿ ಇವರು ರಾಷ್ಟ್ರಮಟ್ಟದ ‘ವಿಶ್ವ ಜ್ಞಾನಶ್ರೀ ಪುರಸ್ಕಾರ’ ನೀಡಿ ಸತ್ಕರಿಸಿರುವರು. ಅಲ್ಲದೆ ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನದ ಪ್ರತಿಷ್ಠಿತ ಸ್ವರ್ಣ ಸಿರಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.
ಕಲಾಜಗತ್ತು, ಮುಂಬಯಿ ಇವರು ತೌಳವ ಪ್ರಶಸ್ತಿ ಕೊಟ್ಟು ಸತ್ಕರಿಸಿದ್ದಾರೆ.
ಜೋಗೇಶ್ವರಿ ದಹಿಸರ್’ನ ಏಕಾಂತ ನಾಟಕ ಆನ್ಲೈನ್ ಸ್ಪರ್ಧೆಯಲ್ಲಿ ಬಹುಮಾನ ಸಿಕ್ಕಿದೆ.
ಬಂಟರವಾಣಿಯ ವೃದ್ಧಾಶ್ರಮ ಪರಿಕಲ್ಪನೆ – ಲೇಖನ ಸ್ಪರ್ಧೆಯಲ್ಲಿ ಬಹುಮಾನ ಸಿಕ್ಕಿದೆ.
ಬಂಟರ ಸಂಘದ ಬಂಟ್ಸ್ ಟ್ಯಾಲೆಂಟ್ನಲ್ಲಿ ಕೊಡಿ ಅಡಿ (ಮಧು ಹೇಳುವುದು) ಊರು ಪರ ಊರುಗಳಲ್ಲಿ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಾರೆ.
ತುಳು ಲಿಪಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುವರು.
ತುಳುವೆರ ಕಲ ಕುಡ್ಲ 36 ಸ್ಪರ್ಧೆಗಳಲ್ಲಿ ಭಾಗವಹಿಸಿ 36 ಅಭಿನಂದನಾ ಪತ್ರಗಳು ಅದರಲ್ಲಿ ಹೆಚ್ಚಿನ ಕಥೆ ಕವನ, ಲೇಖನ ಚಿಟ್ಕಾಗಳು, ಲಿಮೆರಿಕ್ ಟಾಪ್ ಟೆನ್ನಲ್ಲಿ
ಗೆದ್ದಿವೆ. ಯೂಟ್ಯೂಬ್ ನಲ್ಲಿಯೂ ತುಳುವ ಜಾಲ್ದ ಸಿಮ್ಮದಾ ಕಿನ್ನಿ ಕವನ ಪ್ರಸಾರವಾಗಿದೆ.
ಓಂ ಕಾವೇರಿ ಬಳಗ ಕರ್ನಾಟಕ
ಮತ್ತು ಖಿದ್ಮಾ ಫೌಂಡೇಶನ್ ಕರ್ನಾಟಕ ಇವರ
ಚುಟುಕು, ಹನಿಗವನ, ಟಂಕಾ, ರುಬಾಯಿ 400ಕ್ಕೂ ಹೆಚ್ಚು ರಚಿಸಿದ್ದಾರೆ. 350ಕ್ಕೂ ಹೆಚ್ಚು ಅತ್ಯುತ್ತಮ ಪ್ರಥಮ, ಉತ್ತಮ ಸ್ಥಾನ ದೊರೆತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡಿದ್ದಾರೆ.
- ಬಂಟರವಾಣಿಯಲ್ಲಿ, ಟೈಮ್ಸ್ ಕುಡ್ಲ ಪತ್ರಿಕೆಯಲ್ಲಿ, ಛಾಯಕಿರಣದಲ್ಲಿ ಇವರ ಲೇಖನಗಳು ಪ್ರಕಟವಾಗುತ್ತಿವೆ.
ಟಿವಿಯಲ್ಲಿ ಪ್ರಸಾರವಾಗಿರುವ ಸಕಿಯರ ಸಕತ್ತು ಸಿನೇಮಾ ನಟಿ ವಿನಯಾ ಪ್ರಸಾದ್ ರೊಂದಿಗೆ ಸಂದರ್ಶನ ಮಾಡಿರುವಂತಹ ಹರಿಣಿ ಶೆಟ್ಟಿಯವರು ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ಸಕ್ರೀಯರಾಗಿ ತೊಡಗಿಸಿಕೊಂಡಿದ್ದಾರೆ.
ಸಾಮಾಜಿಕ ಚಟುವಟಿಕೆಗಳು
ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಮಿಟಿ ಸದಸ್ಯೆಯಾಗಿ, ಎಂ.ಎಸ್.ಆರ್.ಎಸ್. ಅಲ್ಯೂಮಿನಿ ಎಸೋಸಿಯೇಶನ್ ಕಮಿಟಿ ಸದಸ್ಯೆ, ಬಂಟ್ಸ್ ಸೇವಾದಳ ಭಾಂಡೂಪಿನ ಸಲಹಾಗಾರ್ತಿ, ಛಾಯಾ ಕಿರಣದ ಸಂಪಾದಕೀಯ ಮಂಡಳಿ ಮಾಜಿ ಸದಸ್ಯೆ, ಕನ್ನಡ ವೆಲ್ಫೇರ್ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಮಾಜಿ ಕಮಿಟಿ ಸದಸ್ಯೆ, ಕಲಾ ಜಗತ್ತು ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿ, ಹಿಂದೂ ಜೂನಿಯರ್ ಕಾಲೇಜ್ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಮಾಜಿ ಉಪಾಧ್ಯಕ್ಷೆ, ರಂಗ ಮಿಲನದ ಮಾಜಿ ಉಪಾಧ್ಯಕ್ಷೆ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತನ್ನನ್ನು ಗುರುತಿಸಿಕೊಂಡಿದ್ದಾರೆ.
ತೀರ್ಪುಗಾರರಾಗಿ,ಅತಿಥಿಯಾಗಿಕವಿಗೋಷ್ಠಿಗಳಲ್ಲಿ ಹಲವಾರು ಸಂಘ-ಸಂಸ್ಥೆಗಳಲ್ಲಿ ಪಾಲ್ಗೊಂಡಿರುವವರು.
ಹೀಗೆ ನಾಟಕ, ಟೆಲಿಫಿಲಂ, ತಾಳಮದ್ದಲೆ, ಯಕ್ಷಗಾನ, ಭಜನೆ, ನೃತ್ಯ, ಕಥೆ, ಕವನ, ಲೇಖನ ಎಲ್ಲ ಕ್ಷೇತ್ರದಲ್ಲಿಯೂ ಬಹುಮುಖ ಪ್ರತಿಭೆಯ ಹರಿಣಿ ಎಂ. ಶೆಟ್ಟಿಯವರಿಗೆ ಇನ್ನಷ್ಟು ಪ್ರಶಸ್ತಿಗಳು, ಸಾಮಾಜಿಕ ಸೇವೆಗಳು ಹರಸಿ ಬರಲೆಂದು ಹಾರೈಸುವೆವು.
ಸಂಗ್ರಹ:
ಕವಿತ್ತ ಕರ್ಮಮಣಿ, ಕರ್ನಾಟಕ
ಜಿಲ್ಲಾಧ್ಯಕ್ಷರು: ಕಸ್ತೂರಿ ಸಿರಿಗನ್ನಡ ವೇದಿಕೆ(ರಿ.) ಬೆಳಗಾವಿ