#ಚುನಾವಣೆ ಪರ್ವ ದೇಶದ ಗರ್ವ, ಸಾರ್ವತ್ರಿಕ ಲೋಕಸಭಾ ಚುನಾವಣೆ-2024 (ಪ್ರಜಾಪ್ರಭುತ್ವದ ಹಬ್ಬ) “ನನ್ನ ಮತ ನನ್ನ ಹಕ್ಕು”
ಮತ ಚಲಾಯಿಸಲು ನಾವು ಸಿದ್ಧರಾಗಿದ್ದೇವೆ,
ನೀವು ಸಿದ್ದರಾಗಿ….

ದೇಶದ ಕುರುಕ್ಷೇತ್ರ 2024 ಲೋಕ ಸಭಾ ಚುನಾವಣೆ ಮುಂದಿನ ತಿಂಗಳಲ್ಲಿ ನಡೆಯಲಿರುವ ಎರಡು ಹಂತದ ಲೋಕ ಸಭಾ ಚುನಾವಣೆಯ ಮೂದಲು ಹಂತದಲ್ಲಿ ಏಪ್ರಿಲ್ ತಿಂಗಳಲ್ಲಿ 27ರಂದು ಎರಡನೇ ಹಂತದ ಮೇ 7 ನೇ ತಾರೀಖು ದೇಶ ಆಳುವ ರಾಜನನ್ನು ಆಯ್ಕೆ ಮಾಡುವ ಸುವರ್ಣ ಅವಕಾಶವನ್ನು ನಮ್ಮ ಹೆಮ್ಮೆಯ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡಲು ಅವಕಾಶ ಒದಗಿ ಬಂದಿದೆ. ನಾವು ನೀವು ಎಲ್ಲರೂ ಸೇರಿ
ಪ್ರಜಾಪ್ರಭುತ್ವ ಉಳಿವಿಗಾಗಿ ನೂತನ ರಾಷ್ಟ್ರ ನಿರ್ಮಾಣಕ್ಕಾಗಿ ಕಂಕಣ ಬದ್ಧರಾಗಿ ನಮ್ಮ ಹಕ್ಕು ತಪ್ಪದೆ ಮತದಾನ ಮಾಡೋಣ ಮಾಡಿಸೋಣ.

ನಾವು ನೀವು ಎಲ್ಲರೂ ಸೇರಿ ಒಗ್ಗಟ್ಟಿನಿಂದ ನಮ್ಮ ಹೆಮ್ಮೆಯ ಹಕ್ಕು ತಪ್ಪದೆ ಮತದಾನ ಮಾಡೋಣ ಮಾಡಿಸೋಣ.
“ಮತದಾನ ನಮ್ಮ ಹಕ್ಕು, ಎಲ್ಲರೂ ಮತದಾನ ಮಾಡೋಣ,
ಮರೆಯದೇ ಮತ ಚಲಾಯಿಸಿ, ನಿಮ್ಮ ಮತ, ನಿಮ್ಮ ಹಕ್ಕು, ನಿಮ್ಮ ಕರ್ತವ್ಯ.”
ನೀವೆಲ್ಲ ಮತ ಹಾಕಿ ಫೋಟೋ ಪೋಸ್ಟ್ ಮಾಡಿರಿ. ನಾವು ಮತ ಹಾಕಲು ಕೋಲಾರ ಜಿಲ್ಲೆಯಿಂದ ನಮ್ಮೂರಿಗೆ 700 ಕಿಮೀ ಪ್ರಯಾಣ ಮಾಡಬೇಕು. ಪ್ರಜಾಪ್ರಭುತ್ವದ ಹಬ್ಬಕ್ಕೆ ಜಯವಾಗಲಿ….
ನಮ್ಮ ಒಂದು ಕ್ಷಣದ ನಿರ್ಧಾರ ನಾಡಿನ ಭವಿಷ್ಯವನ್ನೇ ಬದಲಿಸಬಲ್ಲದು.
ವಿವೇಚನೆಯಿಂದ ಮತ ಹಾಕಿ,
ನಾವು ತಪ್ಪದೇ ಹಕ್ಕು ಚಲಾಯಿಸೋಣ.

ನೀವು?

ಮತ ಹಾಕಿ ಹಾಕ್ಸಿ ಮಹಾ ಕುರುಕ್ಷೇತ್ರ ಲೋಕ ಸಭಾ ಚುನಾವಣೆ 2024
ಜೈ ಭಾರತ್ ಮಾತೆ..! ಜೈ ಕರ್ನಾಟಕ ಮಾತೆ..!
ನಮ್ಮ ದೇಶ ನಮ್ಮ ಕೈಯಲ್ಲಿ ಮತದಾನ ನಮ್ಮೆಲ್ಲರ ಹಕ್ಕು, ನನ್ನ ಮತ ನನ್ನ ಹಾಗೂ ನನ್ನ ಕುಟುಂಬದ ಹಾಗೂ ಸಮಾಜದ ಭವಿಷ್ಯಗೋಸ್ಕರ ಪ್ರಾಮಾಣಿಕವಾಗಿ ಚಲಾಯಿಸುತ್ತಿದ್ದೇನೆ ನೀವು?
ನಾನು ಮತ ಹಾಕುವೇ
ನೀವು ತಪ್ಪದೇ ಮತ ಹಾಕಿರಿ,
ಪ್ರಜಾಪ್ರಭುತ್ವ
ಎತ್ತಿ ಹಿಡಿಯಿರಿ,
ಆಮಿಷಕ್ಕೊಳಗಾಗಿ
ಮಾಡಿದ ಮತದಾನ
ಮತದಾನ ಪ್ರಕ್ರಿಯೆಯ ದಿನವೇ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ.
ಆದರೆ ಯೋಚಿಸಿ ನಿರ್ಧಾರ ಮಾಡಿಕೊಂಡು ಮಾಡಿದ ಮತದಾನ ಮುಂದಿನ ಐದು ವರ್ಷಗಳವರೆಗೂ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತದೆ…
ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ. ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಗಳಲ್ಲಿ, ಮನೆಗಳಲ್ಲಿ ಮತಗಳಲ್ಲಿ ಪರಿವರ್ತನೆಗಾಗಿ ತಪ್ಪದೇ ಎಲ್ಲರೂ ಮತ ಚಲಾಯಿಸಿ… ನಮ್ಮ ಮತ ನಮ್ಮ ಧ್ವನಿ….
ದಯಮಾಡಿ ಎಲ್ಲರೂ ಮತದಾನ ಮಾಡಿ ಬಿಸಿಲು ಮಳೆಯೆಂದು ಆಲಸ್ಯ ತೋರದಿರಿ. ಇದು ಕೇವಲ ಸರ್ಕಾರ ಅಥವಾ ರಾಜಕೀಯಕ್ಕೇ ಸೀಮಿತವಲ್ಲ ಇದು ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ. ಮುಂದಿನ ಭವಿಷ್ಯದ ನಿರ್ಧಾರ,
ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ದೊಡ್ಡ ಹಬ್ಬ ಚುನಾವಣೆ.

ಡಾ ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ಪ್ರಜಾಪ್ರಭುತ್ವ ನಮಗಾಗಿ ನಮ್ಮ ದೇಶದ ಅಭಿವೃದ್ಧಿಗಾಗಿ… ಈ ಹಬ್ಬದಲ್ಲಿ ನಾವೆಲ್ಲರೂ ಉತ್ಸಾಹದಿಂದ ಪಾಲ್ಗೊಂಡು, ಸೂಕ್ತ ಕೇಂದ್ರ ಸರ್ಕಾರಕ್ಕೆ ಮತವನ್ನು ಚಲಾಯಿಸುವ ಮೂಲಕ ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ,
ನಾನು ನನ್ನ ಹುಟ್ಟಿದೂರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲುಕಿನ ಬಲಶಟ್ಟಿಹಾಳನ ಶಾಲೆಯಲ್ಲಿ ಮತದಾನ ಮಾಡಲಿದ್ದೇನೆ.
ತಾವು ತಪ್ಪದೇ ಮತದಾನ ಮಾಡಿ,
ಪ್ರಜಾಪ್ರಭುತ್ವದ ಪ್ರಜೆಗಳ ಹಕ್ಕನ್ನು ಚಲಾಯಿಸೋಣ…
ಉತ್ತಮ‌, ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕುವ ಕಾರ್ಯದಲ್ಲಿ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದು,

ಮತದಾನ ನಿಮ್ಮ ಹಕ್ಕು, ನಿಮ್ಮ ಹಕ್ಕನ್ನು ಜಾಗರೂಕತೆಯಿಂದ ಚಲಾಯಿಸಿ,,
ಮತದಾನ ನಮ್ಮೆಲ್ಲರ ಹಕ್ಕು…
ಈ ಒಂದು ದಿನ ನಾವು ಮಾಡುವ ಮತದಾನ ಐದು ವರ್ಷ ಆಳ್ವಿಕೆ ಮಾಡುವ ನಮ್ಮ ನಾಯಕನಾಗಿ ಆಯ್ಕೆ ಆಗುತ್ತಾರೆ,
ಅವರು ಮುಂದಿನ ದಿನಗಳಲ್ಲಿ ನಮ್ಮ ಕೈಗೆ ಸಿಗ್ತಾರೆ ಇಲ್ಲವೋ…? ನಮ್ಮ ಸಮಸ್ಯೆ ಆಲಿಸಲು ಆಸಕ್ತಿ ವಹಿಸಿತ್ತಾರಾ ಇಲ್ಲವೋ…? ದೇಶದ ಅಭಿವೃದ್ಧಿಗೆ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೆ ಇಲ್ಲವೋ…?
ನಿಮ್ಮ ಕಣ್ಣಿಗೆ ಕಾಣಿಸಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ನೆರವು ಹಾಕ್ತಾರ ಇಲ್ಲವೋ…?
ದೇಶ ಸುಭದ್ರ ರೀತಿಯಲ್ಲಿ ಆರ್ಥಿಕ ಮತ್ತು ನಿರುದ್ಯೋಗ ನಿವಾರಣೆ, ಬಡತನ ನಿರ್ಮೂಲನೆ ಹೀಗೆ ಹಲವಾರು ಪ್ರಕಾರಗಳಲ್ಲಿ ದೊಡ್ಡ ದೊಡ್ಡ ಮಟ್ಟದಲ್ಲಿ ಸಮಸ್ಯೆಗಳು ನಮ್ಮ ಮುಂದೆ ಇದೆ,,,
ಒಮ್ಮೆ ಗಾಡವಾಗಿ ಯೋಚಿಸೋಣ.
ವಿಶೇಷ ಆದ್ಯತೆ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅಯೋಗ್ಯರಿಗೆ ಬುದ್ಧಿ ಕಲಿಸುವ ಸುವರ್ಣ ಸಮಯವಿದು ನಿಮ್ಮ ಆಯ್ಕೆ ಯಾವಾಗಲೂ ನಿಮ್ಮ ಜೊತೆ ನಿಮ್ಮೊಂದಿಗೆ ಇರುವ ವ್ಯಕ್ತಿಗೆ ಅವಕಾಶ ಕಲ್ಪಿಸಿ, ಈ ಜೀವನ ಇರುವುದು ಮೂರು ದಿನದ ಸಂತೆ
ಈ ಒಂದು ಲೋಕ ಸಭಾ ಚುನಾವಣೆಯ ಸಂದರ್ಭದಲ್ಲಿ ಯಾರನ್ನು ದ್ವೇಷದಿಂದ ಕಾಣದಿರಿ,
ಶತ್ರುಗಳಂತೆ ಕಂಡರೂ ಮಿತ್ರರಂತಯೇ ವರ್ತಿಸಿ, ಪ್ರೀತಿಯಿಂದ ಮಾತನಾಡಿಸಿ, ಏಕೆಂದರೆ ದ್ವೇಷದಲ್ಲೇನಿದೆ, ಪ್ರೀತಿಯಲ್ಲಿರದಿರುವುದು,
ದ್ವೇಷ ಆರಿಸಲಾಗದ ಬೆಂಕಿ ಪ್ರೀತಿ ಮುಗಿಯದ ಮಮತೆ, ಒಬ್ಬರ ಮೇಲಿನ ಮನಸ್ತಾಪ ಮನೆಮಂದಿಯೊಂದಿಗೆ ದ್ವೇಷಕ್ಕೆ ಕಾರಣವಾಗಬಾರದೆಂದಿಗೂ,
ಚುನಾವಣೆಗಳು ಬರುತ್ತವೆ ಅವು ಹಾಗೆ ಹೋಗುತ್ತೇವೆ.
ಆದರೆ ಕೆಳ ಮಟ್ಟದಲ್ಲಿ ದಿನಾಲೂ ನಾವು ನೀವು ಎಲ್ಲರೂ ಸೇರಿ ನಮ್ಮ ಮುಖ ನೀವು ನೋಡುತ್ತೇವೆ, ನಿಮ್ಮ ಮುಖ ನಾವು ನೋಡುತ್ತೇವೆ. ಇದು ನಾವು ನಮ್ಮಲ್ಲಿ ಮನವರಿಕೆ ಇರಬೇಕು ಅಷ್ಟೇ ಸಾಕು.
ತುಪ್ಪ ಸವಿಯಲು ಚಂದ ಹಾಗಂತ ಬೆಂಕಿಗೆ ಸುರಿದರೆ ಧಗ ಧಗ ಮತ್ತಷ್ಟು ಬಿಸಿಯ ತಾಪಕ್ಕೆ ಕಾರಣ. ಯಾವುದೇ ಕೆಲಸ ಕಾರ್ಯಕ್ಕೆ ಕೈ ಹಾಕುವ ಮುನ್ನ ಅವರವರದೇ ಆದಂತಹ ಸ್ವತಃ ಸ್ವಂತಿಕೆಯ ನಿರ್ಧಾರ ಹಾಗೂ ಮನಸಾಕ್ಷೀಯ ಒಪ್ಪಿಗೆಯ ಮೇರೆಗೆ ಮುಂದೆ ಹೋಗಿ ಅದುವೇ ಯಶಸ್ವಿಯಾಗಲೂ ಇಡುವ ಹೆಜ್ಜೆಗೆ ಮೆಟ್ಟಿಲು ನೆನಪಿರಲಿ

ಲೇಖಕರು: ಮಶಾಕ ಅಬ್ದುಲ್ ತಾಳಿಕೋಟಿ
ಲೇಖಕರು: ಮಶಾಕ ಅಬ್ದುಲ್ ತಾಳಿಕೋಟಿ

ಚಿಕ್ಕ ಪುಟ್ಟ ವಿಷಯ ವಿಚಾರಗಳನ್ನು ಅರಿತು ಬೆರೆತು ಅರ್ಥೈಸಿಕೊಂಡು ಮುಂದೆ ಸಾಗುವ ಜೀವನವೇ ಚಂದ, ನಾವೆಂದಿಗೂ ನಾವಾಗಿರುವ ನಮ್ಮನ್ನು ಪ್ರೀತಿಸುವವರೊಂದಿಗೆ ಎಂದೆಂದಿಗೂ ಜೊತೆಯಾಗಿರುವ ಎಲ್ಲರಿಗೂ ಸೇರಿ ಈ ಲೋಕ ತಂತ್ರ ಕುರುಕ್ಷೇತ್ರ ಲೋಕ ಸಭಾ ಚುನಾವಣೆಯಲ್ಲಿ ಎಲ್ಲಾರೂ ಸೇರಿ ತಪ್ಪದೆ ಮತದಾನ ಮಾಡೋಣ ಮಾಡಿಸೋಣ, ಶುಭವಾಗಲಿ ಪ್ರೀತಿ ಪಾತ್ರರೇ ಪ್ರೀತಿ ಇರಲಿ ನಿಮ್ಮೆಲ್ಲರ ಮೇಲೆ….

ಲೇಖಕರು: ಮಶಾಕ ಅಬ್ದುಲ್ ತಾಳಿಕೋಟ