ಬದುಕಿನ ಪಯಣ
ನಗುವಿನ ಮುಖದಲ್ಲಿ ಅಡಗಿರುವ ಸಾಕಷ್ಟು ರೀತಿಯ ನೋವು ನಲಿವುಗಳು..
ಮೌನದ ಮನಸ್ಸಿನಲ್ಲಿ ತುಂಬಿರುವ ಹಲವು ರೀತಿಯ ಭಾವನೆಗಳು..
ಮಾತಿನಿಂದಲೇ ಮಾಸಿಹೋಗುವ ಅನೇಕ ರೀತಿಯ ಸಂಬಂಧಗಳು..
ಸಮಯದೊಂದಿಗೆ ಮರೀಚಿಕೆಯಾಗೊ ವಿವಿಧ ಕನಸುಗಳು..
ತಿಳಿಯದೆಯೇ ಎಡವಿ ಬೀಳುವ ಕೆಲವು ಕ್ಷಣಗಳು.
ಅರಿತರೂ ಅಡ್ಡದಾರಿಯಲಿ ಇಡುವ ಹಲವು ಹೆಜ್ಜೆಗಳು..
ಬದುಕಿನ ಬಣ್ಣವ ಬದಲಾಯಿಸುವ ಕೆಲವು ಸನ್ನಿವೇಶಗಳು
ಜೀವನದ ಪಯಣದಲಿ ಆಗುವವು ಹಲವು ಅದ್ಭುತ ಅನುಭವಗಳು.
ಎಲ್ಲರಿಂದಲೂ ಜೀವನದುದಕ್ಕೂ ಸಿಗುವ ಜೀವನ ಪಾಠಗಳು
ಮನದಲ್ಲಿ ತುಂಬುವ ಅಳಿಸಲಾಗದ ಸಿಹಿ ಕಹಿ ನೆನಪುಗಳು…
ಮರೆಯಾದರೂ ಮರೆಯಾಗದಂತಿರುವ ಸುಂದರ ಕ್ಷಣಗಳು .
ಕೊನೆಗೊಮ್ಮೆ ಈ ಜೀವನದ ಪಯಣದಲ್ಲಿ ಎಲ್ಲವೂ ಅವಿಸ್ಮರಣೀಯವಾಗುವುದು.ಇದೆ ಜೀವನದ…..
– ಕಾಮನಬಿಲ್ಲು ಸಾಹಿತಿ ಮೌನೇಶ್. ಜೆಕೆ., ಕಲಬುರ್ಗಿ