ಕರುನಾಡ ಕಲ್ಪವೃಕ್ಷ
“””'”””””””
ಕಾಯಕಯೋಗಿ ಕಲ್ಯಾಣಕಾರಿ ಬಸವಣ್ಣ
ಸತ್ಸಂಗ ದಾಸೋಹ ಕಾಯಕಲ್ಪತರು ನೀನಣ್ಣ
ಶಿವಶಕ್ತಿ ಸಂಕಲ್ಪದ ಜ್ಯೋತಿ ಬೆಳಗಿದೆ ಅಣ್ಣ
ಕ್ಷತ್ರಿಯ ವೈಶ್ಯ ಶೂದ್ರವೆಂಬ ಮೌಡ್ಯ ಮೆಟ್ಟಿದೆ ಅಣ್ಣ
ನಿಸ್ವಾರ್ಥ ನಿಷ್ಕಾಮ ಅಂತಂಕರಣದಿ ಅಮರನಣ್ಣ

ಧರ್ಮ ಪರಧರ್ಮ ಸಾಮರಸ್ಯ ಸಮದರ್ಶಿತ್ವದಲ್ಲಿ
ಸುಜ್ಞಾನಿಗಳ ವಿಶ್ವಪ್ರೇಮ ಅನುಭಾವಿತ್ವದಲ್ಲಿ
ವಚನಾಮೃತ ಜ್ಞಾನದ ಅಂತಂ ಪ್ರಭೆಯಲಿ
ಲೌಕಿಕ ಸಿರಿ ಭೋಗವನ್ನಳಿಧ ತ್ಯಾಗಿ
ಸತ್ಪಥದಲಿ ದೀನದಲಿತರಿಗೂ ಮಿಡಿದ ಜ್ಯೋತಿ

ಬಾಹ್ಯಡಂಬರದ ಕಪಟ ಭಕ್ತಿಯನ್ನಳಿದ
ಸರ್ವರೂ ಆಪ್ತರೆಂಬ ಭಾವ ಸ್ಪಂದನದಿ
ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವವರೇ
ಕುಲಜರೆಂಬ ಬಂಧುತ್ವ ಬಿತ್ತಿದ ಕ್ರಾಂತಿಕಾರ
ಆತ್ಮೋನ್ನತಿಯ ಸದ್ಭಕ್ತ ಸಾಧಕ ಹರಿಕಾರ

ಕಾಯಕವೇ ಶಿವಭಕ್ತಿ ಕಾಯಕವೇ ಶಿವಪೂಜೆ
ಕಾಯಕವೇ ಮನುಜ ಧರ್ಮ ಕಾಯಕವೇ ಸ್ವರ್ಗ
ಧಾರ್ಮಿಕ ಕಲ್ಯಾಣ ಸದ್ಗುಣಗಳ ಭಂಡಾರ
ಕೈಲಾಸ ಬೇಡೆನಗೆ ಕಾಯಕವೇ ದೇವರು
ದಯೆಯೇ ಧರ್ಮದ ಸಿದ್ಧಾಂತವೆಂದ ಅಮರತ್ವದ ಶರಣ

– ಯಶೋದಾ ರಾಮಕೃಷ್ಣ, ಮೈಸೂರು