ಬಣ್ಣ
ಬಣ್ಣದ ಹಬ್ಬ ಹೋಳಿ
ಮನಗಳೆಲ್ಲ ರಸದಾಳಿ
ನವರಂಗದಲಿ ಮಿಂದೆಳುವ
ನಗಿಸಿ ನಲಿವ ಜಂಗುಳಿ
ಭಾವೈಕ್ಯತೆಯ ಓಕುಳಿ
ದ್ವೇಷ ಮರೆಸುವ ಸುಳಿ
ರಂಗೇರುವ ಭಾಂಗ್ ದಲ್ಲಿ
ಸಮಾನತೆಯ ತಂಗಾಳಿ
ಕೆಟ್ಟ ಭಾವನೆ ಅಳಸಲಿ
ಬದುಕು ಬಣ್ಣವಾಗಲಿ
ಗೋವರ್ಧನ ಗಿರಿ ರಂಗನಿಗೆ
ಗೋಪಿಕೆಯರಿಂದ ರಂಗಾವಳಿ
ಕಾಮದಹನದಿ ರಂಗುಚೆಲ್ಲಿ
ಕಾಮನ ಬಿಲ್ಲಿನ ರಂಗೋಲಿ
ಜೀವ ತುಂಬುವ ಹೋಳಿ ಹಬ್ಬ
ಈ ಲೋಕದ ಭಾವ ಬಣ್ಣದಲಿ
ಪಂಚಭೂತಗಳನ್ನ ಮೇಳೈಸಿ
ಪಂಚೇಂದ್ರಿಯಗಳ ಅರಳಿಸಿ
ಪಂಚ ಅಮೃತವ ಬೆರೆಸುತ
ಪಂಚಶೀಲ ತತ್ವಗಳರಿಸಿ
ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ