ನನ್ನಾಕೆಯ ಕಿವಿ ಓಲೆಗಳು
(ಹಾಸ್ಯ: ಪತಿಯ ಗೋಳು..)
ನನ್ನವಳು ಬಲು ಹಠಮಾರಿ..
ಅವಳು ನಗಬೇಕಾದ್ರು
ನಾನು ಕೊಡಿಸಬೇಕು ದುಬಾರಿ ನಗ.
ಹೊಸ ನಮೂನೆಯ ನಗ ಕೊಡಿಸದಿದ್ರೆ
ನನ್ನ ಕುತ್ತಿಗೆಗೆ ಬೀಳುವುದು ನೊಗ.
ಕೊಡಿಸಿದರೆ ನನ್ನ ಬಾಳು ಸ್ವರ್ಗ
ಕೊಡಿಸದಿದ್ದರೆ ನನ್ನ ಬಾಳು ನರಕ.
ಅಕ್ಕಸಾಲಿಗನಾ ನಯವಾದ ಮಾತಿಗೆ,,
ಮರುಳಾಗುವಳು ನನ್ನವಳು,,
ಹೋದ ವರ್ಷ ತೆಗೆದುಕೊಂಡ ಕಿವಿಯೋಲೆಯನ್ನು
ಕೊಡುವವಳು ಅಕ್ಕಸಾಲಿಗನಿಗೆ.
ಅಕ್ಕಸಾಲಿಗನು ತೆಗೆಯುವನು ಅದನ್ನು ಅರ್ಧಬೆಲೆಗೆ
ಮತ್ತೆ ಅದರ ಮೇಲೆ ದುಡ್ಡು ಕೊಟ್ಟು ತರುವಳು
ಹೊಸ ಕಿವಿಯೋಲೆಯನ್ನು ಮನೆಗೆ.
ಮಧುವೆ ಆದ ಹೊಸತರಲ್ಲಿ
ಕಿವಿಯೋಲೆಗಳಿದ್ದವು ತೋಲದ ಲೆಕ್ಕದಲ್ಲಿ.
ಈಗ ಅದರ ಮೇಲೆ ದುಡ್ಡು ಕೊಟ್ಟರು
ಆಗಿದ್ದಾವೆ ಗ್ರಾಮ್ ಲೆಕ್ಕದಲ್ಲಿ.
ಆದರೂ ಬುದ್ದಿ ಬರದು ನನ್ನಾಕೆಗೆ
ಕಿವಿಯೋಲೆಗಳು ಮಿಲಿ ಗ್ರಾಮ್ ತಲುಪಿದರು
ಬುದ್ದಿ ಬರದು ಆಕೆಗೆ…..
(ರಾಘವೇಂದ್ರ, ಸಿಂತ್ರೆ.)
(ರಾಜಕಮಲ್, ಸಿರ್ಸಿ)…..