ಪ್ರಿಯತಮ
********
ಪ್ರಿಯತಮ ಬರುವನು ದಾರಿಯ ಕಾಯುತ
ಕುಳಿತಿಹೆನಿಲ್ಲಿಯೆ ನಗುವಿನಲಿ
ಪ್ರೀತಿಯ ಮಾತನು ಆಡುವ ತವಕವು
ಅವನನು ನೋಡುವೆ ಒಲವಿನಲಿ ll
ಖಂಡಿತ ಸೇರುವೆ ಎನ್ನುವ ಆಸೆಯು
ದಿನವಿಡಿ ನೆನಪಲಿ ಕಾಯುವೆನು
ಕಂಡರೆ ಸಾಕಾದು ಒಮ್ಮೆಲೆ ಇನಿಯನ
ನಿದಿರೆಯು ಇಲ್ಲದ ಕಾಲವನು ll
ಸ್ನೇಹವು ತುಂಬಿದ ಮನದಲಿ ನೆನಪಿಸೆ
ಮೋಹದಿ ಹೇಳಲು ಕುಳಿತಿರುವೆ
ದೂರದಿ ಇರುವನು ಹೇಗದು ಕಾಣುವೆ
ಎನ್ನುವ ಭಯಕೆಯು ಮೂಡುತಿದೆ ll
✍️ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ