ಮತದಾನ ಧರ್ಮ
ವೋಟ್ ಮಾಡೋದು ನಮ್ಮ ಅಧಿಕಾರ
ಕ್ರಿಯೇಟ್ ಮಾಡ್ಬೇಕು ಸುದೃಢ ಸರ್ಕಾರ;
ಅಭ್ಯರ್ಥಿ ಆಯ್ಕೆಗೆ ಮಾನಕ ಉಡುಗೊರೆಗಳಲ್ಲಾ
ದೇಶವು ಬಲಿಷ್ಠವಾಗಿದ್ದರೆ ಇಲ್ಲಿ ನಾವು -ನೀವೆಲ್ಲಾ!

ಜೀವನದ ಸಾರಾಂಶ

ಕಾಮಕ್ಕೆ ಪ್ರೇಮದ ಲೇಪನ
ಹೊರ ಬರುವುದು ಸತ್ಯ ಒಂದು ದಿನ,
ತಲೆಯೆತ್ತಿ ನಡೆಯಬಲ್ಲೀರಾ…
ಎಲ್ಲಾ ತಿಳಿದೂ ನಗು ಮೊಗದಲ್ಲಿ ಆ ದಿನ?

ಪ್ರೀತಿ ಎಂಬ ಶುದ್ಧ ಸಂಬಂಧ
ಹೃದಯ ಮನಸು ಶುಚಿಯಾಗಿದ್ದರೇ ತಾನೇ?
ಮುಸುಕು ಹಾಕಿ ಮುನ್ನಡೆದರೆ,
ಮಸಣದಲ್ಲಿ ಮಾಂಸದೂಟ ಮಾಡಿದಂತೇನೆ !

ಮನಸು ಒಪ್ಪಿದರೆ ಬಿಡು ಅಂಜಿಕೆ,
ಭೂಮಿ ಮೇಲೆ ಬಂದ ಎಲ್ಲರೂ ಪಯಣಿಗರು;
ಪ್ರಕೃತಿಯಲ್ಲಿದೆ ಹೂವು ಹಣ್ಣು ಗಡ್ಡೆ,
ಆಸ್ವಾದಿಸಿ ಅನುಭವಿಸಿ ಅವಿನಾಶಿ ಇಲ್ಲಾ ಯಾರೂ!
✍️ ನಾಗರಾಜ ಗುನಗ
ಕೋಡಕಣಿ/ಕುಮಟಾ ತಾಲ್ಲೂಕು