https://youtu.be/aLP4OJWdzcI?si=wdm_QX-1KbBazCeZ
********************
ಭಕ್ತಿಯ ಪ್ರಾರ್ಥನೆ
***************
ನಿರ್ಮಲ ಮನದಲಿ ಭಕ್ತಿಯ ಪ್ರಾರ್ಥನೆ
ಮರ್ಮವ ತಿಳಿದನು ಹರಿಕೃಷ್ಣ
ಕರ್ಮವು ನಿತ್ಯದಿ ಮಾಡಲು ಮಾನವ
ಧರ್ಮವ ಉಳಿಸುವ ಶ್ರೀಕೃಷ್ಣ ll

ಸಂಕಟ ಕಳೆಯಲು ಬಂದನು ಮನದಲಿ
ಪಂಕಜ ನಾಭನೆ ಜಯಕೃಷ್ಣ
ಅಂಕೆಯಿಲ್ಲದೇ ದುರುಳರ ಕೊಂದಿಹೆ
ಶಂಕರ ಮಿತ್ರನೇ ಬಾ ಕೃಷ್ಣ ll

ಕಷ್ಟವ ನೀಗಿಸೆ ಭಕ್ತಿಯ ಪೂಜೆಯು
ಇಷ್ಟದಿ ಗೈಯುವ ಶ್ರೀಹರಿಯ
ನಷ್ಟವು ಬಾರದು ನಿತ್ಯವು ಭಜಿಸಿರೆ
ನಿಷ್ಠೆಯಲೆಂದೂ ನರಹರಿಯ ll

ಮಾನವ ಜನುಮವು ಲಭಿಸಿದು ಪುಣ್ಯವು
ಪಾನದಿ ಜ್ಞಾನವ ಪಡೆಯೋಣ
ದಾನವ ಗೈಯುತ ಸತ್ಯದ ದಾರಿಲಿ
ಪಾವನ ರೂಪನ ನೆನೆಯೋಣ ll

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ
ರಾಗಸಂಯೋಜನೆ ಗಾಯನ
ಶೀಲಾ ಜಿ ಭಟ್ ಪದ್ಯಾಣ.