ಯೌವ್ವನದ ದಿನಗಳಲ್ಲಿ

ನೀ ಬರಲು ಎದುರಲ್ಲಿ ಆಸೆಗಳು ಮನದಲ್ಲಿ
ಗೂಡಿಂದ ಹಾರಿದವು ಹಕ್ಕಿಯಂತೆ ಬಾನಲ್ಲಿ;
ಸ್ಪರ್ಶಕ್ಕೆ ಮನದ ಪಾದರಸ ಏರಿದೆ ಕಾರ್ಮೋಡವಾಗಿದೆ
ಆಲಿಂಗನ ತಂಪೆರೆದರೆ ಸುರಿಸಲು ಜಡಿ ಮಳೆಯ ಧಾರೆ!

ಬಹು ದಿನಗಳಿಂದ ಬಿತ್ತನೆ ಮಾಡಿ ಪೋಷಿಸಿರುವ ಬೆಳೆ
ನಿನ್ನಂತರಂಗದಲ್ಲೂ ಇರಬಹುದು ಪ್ರೇಮದ ಜೀವಸೆಲೆ;
ಅರಿಯಲಾರದೇ ಅರಮನೆಯ ದ್ವಾರ ಕಾಯುತ್ತಲಿರುವೆ
ಕೈ ಹಿಡಿದು ಕರೆದೊಯ್ಯಬಾರದೇ ನನ್ನನ್ನು ನಿನ್ನೊಳಗೆ ?

Happy loving family. Father and his daughter child playing and hugging outdoors. Cute little girl and daddy.

ಶುಭೋದಯ ಸಾಲು

ತಲೆಯೊಳಗೆ ಇಟ್ಟು ಚಿಂತಿಸುವ ವಿಷಯ ಜೀವನದಲ್ಲಿ ಒಂದೇ,
ಅರ್ಜಿ ಹಾಕದೇ ಈ ಭೂಮಿಗೆ ಈ ಕ್ಷಣದಲ್ಲಿ ನಾ ಯಾಕೆ ಬಂದೆ ?

ತಂತ್ರಜ್ಞಾನ ತಲೆಕೆಡಿಸಿಟ್ಟಿದೆ ನಂಬದಿರಿ ಕೇಳುವುದು ಕಾಣುವುದು,
ಅಭಿಪ್ರಾಯ ಬದಲಾವಣೆಗೂ ಮುನ್ನ ಏಕಾಂತದಲ್ಲಿ ಯೋಚಿಸು!

Multi-ethnic group of children lying in a pile in a park

ಸುಶಿಕ್ಷಿತ ಸಮಾಜ

ಸುಶಿಕ್ಷಿತರೆಲ್ಲರೂ ಮಕ್ಕಳನ್ನು ಓದಿಸಿದರು ಹೆಸರಾಂತ ಶಾಲಾ-ಕಾಲೇಜುಗಳಲ್ಲಿ,
ವಿದ್ಯೆ ಕಲಿತು ಕೆಲಸ ಅರಸಿ ಹಾರಿದವರಾ ವೈಭವವು ವಿದೇಶಗಳಲ್ಲಿ;
ಹೆತ್ತವರು ಹೊಗಳಿಕೊಂಡು ಓಡಾಡುತ್ತಿಹರಿಲ್ಲಿ ಮಕ್ಕಳ ವೇತನ_ವ್ಯವಹಾರ,
ಕೊನೆಯುಸಿರಿನಲ್ಲಿ ತುಳಸಿ ನೀರಿಲ್ಲಾ,ಮಣ್ಣು ಮಾಡಲು ಕುದುರಿಸಿದ್ದು ವ್ಯಾಪಾರ!

✍️ ನಾಗರಾಜ ಗುನಗ
ಕೋಡಕಣಿ/ ಕುಮಟಾ ತಾಲ್ಲೂಕು