ಈ ದಿನದ ಪ್ರಶ್ನೆಗಳು..
1- ಕಿತ್ತೂರು ರಾಣಿ ಚೆನ್ನಮ್ಮಳ ಹುಟ್ಟೂರು ಯಾವುದು?
2- ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಬಲಿಯಾದ ಬ್ರಿಟಿಷ್ ಅಧಿಕಾರಿ ಯಾರು?
3- ಸಂಗೊಳ್ಳಿ ರಾಯಣ್ಣನಿಗೆ ಮೋಸ ಮಾಡಿ ಸೆರೆಹಿಡಿಯಲು ಬ್ರಿಟಿಷರಿಗೆ ಸಹಾಯ ಮಾಡಿದವರು ಯಾರು?
4- ಪ್ರತಿ ವರ್ಷ ಕಿತ್ತೂರಿನಲ್ಲಿ ನಡೆಯುವ ಉತ್ಸವ ಯಾವುದು?
5- ರಾಣಿ ಚೆನ್ನಮ್ಮಾಜಿಯ ದತ್ತುಪುತ್ರ ಯಾರು?
6- ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
7- ಭಾರತ ಸರ್ಕಾರವು ಚೆನ್ನಮ್ಮಳ ಹೆಸರಿನ ಅಂಚೆ ಚೀಟಿಗಳನ್ನು ಯಾವ ವರ್ಷ ಬಿಡುಗಡೆಗೊಳಿಸಿತು?
8- ಭಾರತೀಯ ಸಂಸತ್ತಿನಲ್ಲಿ ಚೆನ್ನಮ್ಮಳ ಪ್ರತಿಮೆಯನ್ನು ಅನಾವರಣಗೊಳಿಸಿದ ರಾಷ್ಟ್ರಪತಿಗಳು ಯಾರು?
9- ಯಾವ ಊರಿನಲ್ಲಿರುವ ಚೆನ್ನಮ್ಮಾಜಿಯ ಸರ್ಕಲ್ ತುಂಬಾ ಪ್ರಸಿದ್ಧಿಯಾಗಿದೆ?
10- ರಾಣಿ ಚೆನ್ನಮ್ಮಾಜಿಯ ಹೆಸರಿನೊಂದಿಗೆ ನೆನಪಾಗುವ ಮತ್ತೊಬ್ಬ ಸ್ವಾತಂತ್ರ ಹೋರಾಟಗಾರರು ಯಾರು?

ಈ ದಿನದ ಉತ್ತರಗಳು
1- ಕಾಕತಿ
2- ಥ್ಯಾಕರೆ
3- ಲಿಂಗನಗೌಡ ಮತ್ತು ವೆಂಕನಗೌಡ
4- ಕಿತ್ತೂರು ಉತ್ಸವ
5- ಶಿವಲಿಂಗಪ್ಪ
6- ಬೆಳಗಾವಿ
7- 1977
8- ರಾಷ್ಟ್ರಪತಿ ಪ್ರತಿಭಾ ಪಾಟೀಲ್
9- ಹುಬ್ಬಳ್ಳಿ
10- ಸಂಗೊಳ್ಳಿ ರಾಯಣ್ಣ