“ಕಣ್ಮುಚ್ಚಿ ಕುಳಿತ ಲೋಕ”

ನಂದಿನಿ ಹಾಲು ಕಂದನ ಪಾಲು ಮಾತೃತ್ವದ ಮಹಿಮೆ,
ಚಂದನ ಕಡಿದು ತಂದಿಟ್ಟ ಮೂರ್ತಿ ತಂದೆಯ ಕೊಡುಗೆ;

ಮೋರಿಯ ಸೇರಿದೆ ಕಾವೇರಿ ನೀರು ಅಕ್ಷರಸ್ಥರ ದಾಹಕ್ಕೆ,
ಕೆರೆಯ ಸೇರಿ ಕಲುಷಿತ ಅಂತರ್ಜಲ ಅಭಿವೃದ್ಧಿಯ ಕರೆಗೆ!

ರಸ್ತೆಯ ತುಂಬಾ ವಾಹನ ಮಾಲಿನ್ಯ ಆಡಂಬರದ ಸುಳಿಗೆ,
ಮಾರಣ ಹೋಮದಿ ಮರಗಳು ಮಾಯ ಗೂಡೆಲ್ಲಿ ಹಕ್ಕಿಗೆ ?

ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ವ್ಯವಸಾಯ ಜ್ಞಾನಕ್ಕೆ ಸ್ಥಳವೇ ಇಲ್ಲ,
ಸರಕುಗಳಾಗಿ ಹೊರಬಂದರೆ ಸರ್ಟಿಫಿಕೇಟ್ ಗೆ ಬೆಲೆಯಿಲ್ಲ!

✍️ ನಾಗರಾಜ ಗುನಗ
ಕೋಡಕಣಿ/ಕುಮಟಾ ತಾಲ್ಲೂಕು