“ಕಣ್ತೆರೆದು ನೋಡು”
ಯಾರಿಗ್ಯಾರೂ ಇಲ್ಲಾ ಇಲ್ಲಿ ಯಾರಿಗ್ಯಾರೂ ಇಲ್ಲಾ,
ದೇಹ ನಿನ್ನದೇ ಬಳಿದುಕೋ ಬಣ್ಣ ನುಂಗಿ ನೋವನ್ನೆಲ್ಲಾ;
ದಾರಿಯ ನಡುವೆ ಸಂಬಂಧ ನೂರಾರು ನಿಭಾಯಿಸಬೇಕೆಲ್ಲಾ,
ಖುಷಿಯ ಅನುಭವ ಆಗದ ವಿಷಯಕ್ಕೆ ಚಿಂತಿಸಿ ಫಲವಿಲ್ಲ;

ಹೇಳೋದನ್ನು ಹೇಳಿ ಬಿಡಿ ಮತ್ತೆ ಮತ್ತೆ ಅವಕಾಶವು ಸಿಗುವುದಿಲ್ಲ,
ಹಾಳಾದರೂ ಹೊಸದೇನೋ ಸಿಕ್ಕಂತೆ ಬಾಳಿ ಬದುಕಿ ನೀವೆಲ್ಲಾ.
ಸಮಯದ ಆಟ ಮೇಲಿದ್ದವರು ಕೆಳಗೆ ಯಾವುದೂ ಶಾಶ್ವತವಲ್ಲ,
ಇಂದಿನ ವಯಸ್ಸು ನಾಳೆಯ ಮನಸ್ಸು ಬೇಡಿಕೆಗೆ ಬರವೇಕಯ್ಯ ?

✍️ ನಾಗರಾಜ ಗುನಗ
ಕೋಡಕಣಿ/ಕುಮಟಾ ತಾಲ್ಲೂಕು