ಭೂಮಿ ತೂಕದ ಮಹಿಮಾನ್ವಿತೆ

ಉಪ್ಪಿಗಿಂತ ರುಚಿಯಿಲ್ಲ
ತಾಯಿಗಿಂತ ದೇವರಿಲ್ಲ
ಸಂಸಾರದ ಸಾರಥಿಯಿವಳು
ಮನೆಮನದ ಮಾನಿನಿಯಿವಳು
ಸಹನೆಯಲಿ ಭೂದೇವಿಯ ಸಹಯೋಗ
ಪತ್ಯಕ್ಷವಾಗಿ ಕಾಣುವ ದೇವರೆ ತಾಯಿ
ನೂರಾರು ತೀರ್ಥಕ್ಷೇತ್ರಗಳನ್ನು ಸುತ್ತಿ ಬಂದು
ತಾಯಿಯ ಮನವನ್ನು ನಿಂದನೆಗಳಿಂದ ನೋಯಿಸಿದರೆ
ಅವನ ಸಂಚಿತ ಕರ್ಮ ಕಳೆಯದು
ತನ್ನ ತನುಮನವನ್ನೆ ಮಕ್ಕಳ ಸುಖಕ್ಕಾಗಿ ಮುಡುಪಾಗಿಟ್ಟ
ಮಕ್ಕಳ ಉನ್ನತಿಯಲಿ ತಾ ಸುಖವ ಕಾಣುತ ಹಾರೈಸುವ ಮಾನಿನಿ ತಾಯಿಯಲ್ಲವೇ
ಸದಾ ನೆರಳು ನೀಡುವ ವೃಕ್ಷದಂತೆ ಕರುಣೆಯ ಕಡಲಾಗಿ ಧರಣಿಮಾತೆಯಂತೆ
ಅವಳ ಕರುಳ ಕೂಗಿಗೆ ಮಗುವಾಗಿರಿ
ದೂರದಲ್ಲಿದ್ದರೇನು ತಾಯಿಯ ಖುಷಿಗಾಗಿ
ಪ್ರೀತಿಯೆ ತಾಯಿಗೆ ನೀವು ಕೂಡುವ
ದೂಡ್ಡ ಉಡುಗೊರೆ
ಎಲ್ಲೆ ಇರಲಿ ಸ್ವಾರ್ಥ ಸುಖದಲ್ಲಿ
ಮೈಮರೆತು ಹೆತ್ತವರನ್ನು ಕಡೆಗಣಿಸದಿರಿ
ಜನ್ಮ ಕೂಟ್ಟವರ ಋಣವ ತೀರಿಸಲಾಗದು ಜನ್ಮದಲಿ
ವಿದೇಶದಲ್ಲೆ ಇದ್ದರೂ ನಮ್ಮ ಸಂಸ್ಕೃತಿಯನ್ನು ಮರೆಯದಿರಿ
ತಾಯಿ ವಿಶ್ವಮಾತೆ ವಿಶ್ವಜನನಿ
ಅರಿತು ನಡೆಯಿರಿ

  • Yashodaramakrishna mysore