ವೈಭವದ ಶಿವರಾತ್ರಿ ಹಬ್ಬ
ಚಿತ್ರದುರ್ಗದ ಕಬೀರಾನಂದಸ್ವಾಮಿ ಮಠ ಹಮ್ಮಿ ಕೊಂಡಿರುವ 93 ನೇ ಶಿವರಾತ್ರಿ ಹಬ್ಬದ ಕಾರ್ಯಕ್ರಮಗಳು ಬಹು ಅದ್ಧೂರಿಯಿಂದ ವೈಭವ ಪೂರ್ವಕವಾಗಿ ಜರುಗಿತು. ಈ ಹಬ್ಬಕ್ಕೆ ರಾಜ್ಯಾದ್ಯಂತ್ಯ ಸಹಸ್ರಾರು ಭಕ್ತರು ಸ್ಥಳೀಯ ಸಾರ್ವಜನಿಕರ ಸಾಗರವೇ ಹರಿದು ಬಂದು ಇಲ್ಲಿ ನೆಡೆಯುವ ಹಬ್ಬದ ಸಮಾರಂಭಕ್ಕೆ ವಿಶೇಷವಾದ ಮೆರುಗನ್ನು ನೀಡಿತು. ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಜಾತ್ಯತೀತ ಕಬೀರಾನಂದಸ್ವಾಮಿ ಮಠ ಇಲ್ಲಿ ದಿನಂಪ್ರತಿ ಆ ಶಿವನ ಭಜನೆಯನ್ನು ಹಾಡುವರು ಕೇಳುಗರು ತಮ್ಮ ಭಕುತಿಯ ತರಂಗಿಣಿಯಲ್ಲಿ ಮಿಂದು ತೇಲುತ್ತಿದ್ದರು. ಮಠದ ಕಂಬಗಳು ಬಾಳೇ ಕಂದುಗಳಿಂದ ವಿದ್ಯುತ್ ದೀಪಾಲಂಕಾರ ಪುಷ್ಪಾಲಂಕಾರಗಳಿಂದ ಶೃಂಗಾರಗೊಂಡು ಸ್ವಾಮೀಜಿ ಮಠದ ಅಂಗಳದಲ್ಲಿ ರಂಗು ರಂಗಿನ ರಂಗವಲ್ಲಿಗಳು ಬಂದ ಭಕ್ತಾದಿಗಳನ್ನು ವಿಸ್ಮಯಗೊಳಿಸಿತು .
ರಾಜ್ಯದಾದ್ಯಂತ ಬಂದು ಭಾಗವಹಿಸಿದ ಹಲವಾರು ಗಣ್ಯರು ಹಿತೈಷಿಗಳು ಹಲವು ಮಠಗಳ ಪೀಠಾಧಿಪತಿಗಳು ಕಥೆ ಕವನಗಳ ಮುಖೇನ ನೀಡಿದ ಹಿತ ವಚನ ಪ್ರವಚನಗಳು ಕೆಲವು ಭಕ್ತರ ಪರಿವರ್ತನೆಗೆ ಕಾರಣವಾದರು. ಅರ್ಥಪೂರ್ಣವಾಗಿ ನೆಡೆದ ಹಬ್ಬವು ಈ ಮಠದ ಶಾಲಾ ಕಾಲೇಜಿನ ಪುಟ್ಟ ಪುಟ್ಟ ಕಂದಮ್ಮಗಳಿಂದ ನೃತ್ಯ ಭರತನಾಟ್ಯ ಭಕ್ತಿ ಪ್ರಧಾನವಾದ ಗಾನ ಸುಧೆ ಹರಿಯಿತು ಬಂದ ಭಕ್ತರ ಪ್ರೇಕ್ಷಕರ ಮನೆ ಮನೆ ಮಾತಾಯಿತು. ಜೀ ಕನ್ನಡ ಚಾನೆಲ್ ನಲ್ಲಿನ ಸ ರಿ ಗ ಮ ದ ಗಾನ ಕಲಾವಿದರಿಂದ ಮಧುರ ಗಾನ. ಕಾಮಿಡಿ ಕಿಲಾಡಿಗಳಿಂದ ಹೊರ ಹೊಮ್ಮಿದ ಹಾಸ್ಯವು ಪ್ರೇಕ್ಷಕರನ್ನು ನಮ್ಮನ್ನು ನಗೆಯ ಕಡಲಿನಲ್ಲಿ ತೇಲಿಸಿದಂತಾಯಿತು.
ಅದ್ಧೂರಿಯಾಗಿ ವಿಜೃಂಭಣೆಯಿಂದ ಸಾಗಿದ ದಿಬ್ಬಣವು ಭಜನೆ ಕೋಲಾಟ ಡೊಲ್ಲುಕುಣಿತ ಮುಂತಾದ ವೇಷ ಭೂಷಣಗಳಿಂದ ಕಂಗೊಳಿಸಿ ನೋಡುಗರಿಗೆ ಸಂತಸವನ್ನೀಯೀತು. ಗುರುಗಳ ಕೌದಿ ಪೂಜೆಯಂದು ಶಿವರಾತ್ರಿ ಕಾರ್ಯಕ್ರಮಕ್ಕೆ ಸಹಕಾರ ನೀಡಿ ಶ್ರಮಿಸಿದ ಭಕ್ತಾಧಿಗಳಿಗೆ ಕಾರ್ಯಕರ್ತರಿಗೆ ಗುರುಗಳು ಗೌರವ ಪ್ರಧಾನ ನೀಡಿ ಆಶೀರ್ವಾದಿಸಿದರು . ಹೀಗೆ ಏಳು ದಿನಗಳ ಕಾಲ ಶಿವರಾತ್ರಿ ಹಬ್ಬಕ್ಕೆ ಸುತ್ತ ಮುತ್ತಲಿನ ಸ್ಥಳಗಳಿಂದ ಹರಿದು ಬಂದ ಸಹಸ್ರಾರು ಭಕ್ತರ ಸಮೂಹವು ಕಡಲ ಜಲದ ಅಲೆಯೇ ಬಂದು ಅಪ್ಪಳಿಸಿದ್ದಂತಾಯಿತು .
ನಿಶ್ಚಿತೆ
ಸಜ್ಜನರ ಸಂಗದಲ್ಲಿ ನಾ ಬೆರೆತೆ
ರಚಿಸಿರುವೆ ನಾ ಕಂತುಗಟ್ಟಲೆ ಕವಿತೆ
ಇದರಿಂದ ವೃದ್ಧಿಸುತ್ತಿದೆ ನನ್ನ ಘನತೆ
ನನಗಿಲ್ಲ ಯಾವುದರಲ್ಲೂ ಕೊರತೆ
ದುಃಖ ನೋವುಗಳನ್ನೆಲ್ಲಾ ನಾ ಮರೆತೆ
ಈಗ ನಾ ಸಂಪೂರ್ಣ ನಿಶ್ಚಿಂತೆ
ಮಿತ್ರ –ನಾನು ದೊಡ್ಡ ಸೈನ್ಸಿಸ್ಟ್ ಆಗ ಬೇಕು ಅಂತ ಅಂದ್ಕೊಂಡಿದ್ದೇನಿ ಕಣೋ.
ಮತ್ತೊಬ್ಬ –ಲೇ ಅದು ಅಷ್ಟು ಸುಲಭ ಅಲ್ಲಾ ಅದಕ್ಕೆ ನ್ಯಾಕ್ ಬೇಕು.
ಮಿತ್ರ. ಏನೋ ಇದು ನಾನು ಸೀರಿಯಸ್ಸಾಗಿ ಹೇಳ್ತಾ ಇರೋದು ನ್ಯಾಕಬೇಕು ಅಂಥಾ ತಮಾಷೆ ಮಾಡ್ತೀಯಲ್ಲಾ.
ಅದೇನು ಐಸ್ ಕ್ಯಾಂಡಿನಾ ನ್ಯಾಕೋಕೆ
ಮತ್ತೊಬ್ಬ—- ಅಯ್ಯೋ ನಾನು ಹಾಗಲ್ಲಾ ಹೇಳಿದ್ದೂ ಸ್ವಂತ ಬುದ್ಧಿ ಅದಕ್ಕೆ ಇಂಗ್ಲಿಷ್ ನಲ್ಲಿ ನ್ಯಾಕ್ ಅಂತಾರೆ
ಚಕ್ರವ್ಯೂಹ
ನಾ ಸಿಲುಕಿ ಬಳಲುತ್ತಿರುವೆ ತೀರದಾ ಆಸೆ ಬಯಕೆಗಳೆಂಬ ಚಕ್ರವ್ಯೂಹದಲಿ ಈ ಬಲೆಯಿಂದ ಹೊರ ಬರಲಾರದೇ ನರಳುತ್ತಿರುವೆ ಅಸಹಾಯಕತೆಯಲಿ ಯೋಚಿಸದೇ ಹಲವು ದುಸ್ಸಾಹಸಗಳಿಗೆ ಚಾಲನೆ ನೀಡಿ ಕೈ ಸುಟ್ಟು ಕೊಂಡೆ ಹಣವ ಚೆಲ್ಲಿ ಸ್ನೇಹ ವಿಶ್ವಾಸವೆಂಬ ವ್ಯಾಮೋಹಗಳಿಗೆ ಮಾರು ಹೋದೆ ನನ್ನ ಮೂರ್ಖತನದಲಿ ನಾನು ನಂಬಿದ ಸ್ನೇಹಿತರು ಆಪತ್ತಿನಲಿ ನನ್ನ ಕೈ ಹಿಡಿಯದೇ ಬಿಟ್ಟರು ನಡು ನೀರಿನಲ್ಲಿ ಇಂದು ಜೀವಂತ ಹೆಣವಾಗಿ ಬಿದ್ದಿರುವೆ ಕಳೆದ ಕಹಿ ಘಟನೆಗಳ ಚಿಂತನೆಯಲ್ಲಿ ಬಡಿದು ಎಬ್ಬಿಸುವರಿಲ್ಲಾ ಕೈ ಹಿಡಿದು ನೆಡೆಸುವರಿಲ್ಲಾ ಈ ಹಾಳು ಸಮಾಜದಲ್ಲಿ ಜಬರ್ದಸ್ತು
ಮೀಸೆ ಬಿಟ್ಕೊಂಡು ಗಟ್ಟಿ ಮುಟ್ಟಾಗಿ ಇದ್ದಾನೆ ಭೀಮನಂಗೆ ಅವ ಕೇಳಲು ಬಾರದಂತಹ ಕ್ಲಿಷ್ಟಕರವಾದ ಮಾತುಗಳಿಂದ ಬೈತಾನೆ ನಂಗೆ ವಿಶೇಷ ಚೇತನಳ ಮುಂದೆ ಮೀಸೆ ತಿರುವಿ ಜಬುರ್ದಸ್ತು ಮಾಡ್ತಾನೆ ಶೇಮ್ ಆಗುವುದಿಲ್ಲವೇ ಆ ಮೂಡಂಗೆ ಅವ ಹೇಳೋರು ಕೇಳೋರು ಯಾರೂ ಇಲ್ಲಾಂತ ಅಂದ್ಕೊಂಡಿದ್ದಾನೆ ನಂಗೆ ಇವ ನನಗೆ ಬೈಯ್ಯೋದು ಹಿಂಸೆ ಮಾಡೋದೆಲ್ಲಾ ಗೊತ್ತಾಗುತ್ತೆ ಆ ಶಿವಂಗೆ
ಖಂಡನೆ
ವರುಣನ ಆಗಮಿಸದಿದ್ದರೆ ಮಾಡುವರು ಬಲಿದಾನ
ಅದ ಹೊರತು ಪಡಿಸಿ ಮಾಡಿ ಶ್ರೇಷ್ಠವಾದ ಅನ್ನದಾನ ವಿದ್ಯಾದಾನ
ನಿಲ್ಲಿಸಿರೆಲ್ಲಾ ಮೋಸ ದಗಾ ವಂಚನೆ ಈ ದುಷ್ಕಾರ್ಯಗಳನ್ನ
ಸರ್ವರೂ ಸಾಮೂಹಿಕವಾಗಿ ನಿಂತು ಖಂಡಿಸಿ ಪ್ರಕೃತಿ ಪ್ರಾಣಿ ಹಿಂಸೆಯನ್ನ
ಮಾಡದಿರಿ ಇಲ್ಲ ಸಲ್ಲದ ನಿಷ್ಪ್ರಯೋಜಕವಾದ ಅನಿಷ್ಟ ಕಾರ್ಯಗಳನ್ನ
ಆಗ ಆ ವರುಣ ಮೆಚ್ಚಿ ಆಗಮಿಸಿ ತಣಿಸುವ ಈ ಧರೆಯನ್ನ
ವನವಾಸ
ಕೇಳಿರೀ ಸಜ್ಜನರೇ ಮುಗ್ದ ಮನುಜರೇ ಯಾರೂ ಮಾಡದಿರಿ ದುಷ್ಟ ನೀಚರ ಸಹವಾಸ
ಒಂದು ವೇಳೆ ಅರಿಯದೇ ಮಾಡಿದರೆ ಪ್ರತೀ ಹೆಜ್ಜೆಗೂ ಗಮನವಿಟ್ಟು ಮಾಡಿ ಪ್ರವಾಸ
ಮುಗ್ದ ಮನುಜರ ಮುಖಕ್ಕೆ ಮಸಿ ಬಳಿದು ವಂಚಿಸಿ ಕೆಡುವವರು ದಿನಗಟ್ಟಲೇ ಉಪವಾಸ
ಇಷ್ಟಕ್ಕೂ ಹೇಸದೇ ನಡು ನೀರಿನಲ್ಲಿ ಕೈ ಬಿಟ್ಟು ದೂಡುವರು ಮಾಡಲು ವನವಾಸ
ಸುಳ್ಳಿನ ಕೋಟೆ ಕಟ್ಟಿ ಅಸಹಾಯಕರನ್ನು ಹಿಂಸಿಸಿ ಭೋಗದಲ್ಲೇ ಮೆರೆದು ಸೃಷ್ಟಿಸುವರು ಇತಿಹಾಸ
ದುಷ್ಟರಿಂದಾದ ದುಷ್ಪರಿಣಾಮಗಳು
ಸುಳ್ಳು ವದಂತಿಗಳ ಸೃಷ್ಟಸುವ ನಾಮರ್ಧರು ದೈತ್ಯ ಅಸುರರಂತವರು ಇತರೆ ಸ್ವಾರ್ಥಿಗಳು ಅಧಿಕವಾಗಿಹರು ಇಂದಿನ ಕಲಿಯುಗದ ಈ ಸಮಾಜದಲ್ಲಿ
ಕೆಲವರು ನಿಸ್ಸೀಮರು ಜೀವಂತ ಇದ್ದವರನ್ನು ಇವರು ಇನ್ನಿಲ್ಲ ಇವರು ನೆನಪು ಮಾತ್ರ ಎಂದು ಸುಳ್ಳು ವರದಿಯನ್ನು ಪ್ರಕಟಿಸುವುದರಲ್ಲಿ
ದುಷ್ಟರು ನಿರತರಾಗಿಹರು ಇಂಥಹ ಸುಳ್ಳು ವದಂತಿಗಳ ಸೃಷ್ಟಿಸಿ ಅವಿಭಕ್ತ ಕುಟುಂಬ ಸಮಾಜವನ್ನು ಹಾಳುಗೆಡುವುದರಲ್ಲಿ
ಸೇಡನ್ನು ತೀರಿಸಿಕೊಳ್ಳಲೋಸುಗ ಕೈಯಲ್ಲಿ ಮೊಬೈಲ್ ಇದೆಯೆಂದು ಕೂತಲ್ಲೇ ವಿಷ ಬೀಜ ಬಿತ್ತುವರು ತಮ್ಮ ವಿರೋಧಿಗಳಲ್ಲಿ
ಪ್ರವೀಣ ಸ್ವಾರ್ಥಿಗಳು ತಮ್ಮ ಸ್ವಾರ್ಥಕ್ಕಾಗಿ ನಿರಪರಾಧಿಗಳನ್ನು ಊಹಾಪೋಹಗಳಿಂದ ಅಪರಾದಿಯ ಪಟ್ಟ ಕಟ್ಟಿ ಅವರ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡುವುದರಲ್ಲಿ
ಚಾಣಾಕ್ಷರು ಸಂಸಾರದಲ್ಲಿ ಒಂದಾಗಿ ಸುಖವಾಗಿ ಬಾಳುವ ದಂಪತಿಗಳ ನಡುವೆ ಅಂತರವನ್ನು ಸೃಷ್ಟಿಸಿ ಅನೈತಿಕ ಸಂಬಂಧದ ಸುಳ್ಳಿನ ಕಥೆಯ ಕಟ್ಟಿವಲ್ಲಿ
ದುಷ್ಟರ ಇಷ್ಟೆಲ್ಲಾ ಸುಳ್ಳಿನ ಛಾಟಿಯ ಹೊಡೆತಕ್ಕೆ ಸಿಲುಕಿ ಕೆಲ ಮರ್ಯಾಧಸ್ತರು ಅಮಾಯಕರು ಈ ಮಣ್ಣ ತೆಜಸಲು ಆತ್ಮಹತ್ಯೆಗೆ ಶರಣಾದರಿಲ್ಲಿ
ಅಧಿಕಾರಿಗಳು ಇಂಥಾ ಹಲವು ದುಷ್ಕೃತ್ಯಗಳ ಕಂಡೂ ಕಾಣದಂತೆ ಕೇಳಿಯೂ ಕೇಳಿಸದಂತೆ ಮಾತನಾಡಲು ಅವಕಾಶವಿದ್ದರೂ ಮೂಖರಾಗಿ ಮೌನವಾಗಿಹರಿಲ್ಲಿ
(ದಿ)ಹಕ್ಕು
ಮತ ಚಲಾಯಿಸುವುದು ಮತದಾರನ ಹಕ್ಕು
ವಿಧಿ ಇಲ್ಲದೆ ಹಣ ಪಡೆದು ಮತ ಚಲಾಯಿಸುವ ಹಕ್ಕು
ನಿಮಗುಂಟು ಹಣ ನೀಡಿ ಮತ ಖರೀದಿಸುವ ಹಕ್ಕು
ಕಾರಣ ನಿಮಗಿಲ್ಲಾ ಇದನು ಖಂಡಿಸುವ ಹಕ್ಕು
ಸೀಟು ಸಿಕ್ಕ ಮೇಲೆ ಬದಲಾಗುವುದು ನಿಮ್ಮ ದಿಕ್ಕು
ಮುಂದೈದು ವರ್ಷಗಳ ಕಾಲ ನಮಗ್ಯಾರು ದಿಕ್ಕು
ನಿಮ್ಮಗಳ ಕುರುಕ್ಷೇತ್ರ ಯುದ್ದ ನೋಡುತ್ತಾ ಕೂರ ಬೇಕು
ಅಸಹಾಯಕ ವಯೋವೃದ್ಧರು ವಿಶೇಷ ಚೇತನರು ಇಂಥಾ
ಅನೇಕರು ಪಟ್ಟ ಶ್ರಮಕ್ಕೆ ಫಲ ಇಲ್ಲದೇ ಯಣಗಾಡುತ್ತಿರ ಬೇಕು
ನಾಪತ್ತೆ
ವಿದ್ಯಾವಂತ ಯುವಕ(ತಿ) ಸ್ತ್ರೀ ಯರಿಗೆ ಎರೆಡು ಸಾವಿರ ಭತ್ಯೆ
ಇದರಿಂದ ಅವರ ಸೋಂಬೇರಿತನಕ್ಕೆ ಆಧ್ಯತೆ
ವಯೋವೃದ್ಧರ ಅಂಗವೈಕಲ್ಯತೆವುಳ್ಳವರಿಗೆ ಮಾನಸಿಕ ಹತ್ಯೆ
ಅಧಿಕಾರಿಗಳಲ್ಲಿ ಕರುಣೆಯೆಂಬುದು ನಾಪತ್ತೆ
ಚಪಲ
ಒಬ್ಬನಿಗೆ ಹುಡುಗಿಯರ ಚುಡಾಯಿಸುವ ಚಪಲ
ಒಮ್ಮೆ ಆತ ಒಂದು ಹುಡುಗಿಯ ಕಂಡು ನಿನ್ನದು ರಸಗುಲ್ಲಾದಂಥಃ ಕಪೋಲ
ಎಂದ ಕ್ಷಣದಲ್ಲೇ ಆ ಹುಡುಗಿ ಕೈಗೆತ್ತಿ ಕೊಂಡಳು ಅಲ್ಲೇ ಇದ್ದ ಭಾರಿಕೋಲ
ಕೈಗೆತ್ತಿಕೊಂಡು ಜೋರಾಗಿ ಭಾರಿಸಿದಳು ವದ್ದಾಡುವಂತೆ ವಿಲವಿಲ
ಪತಂಗ
ಸುಂದರವಾದ ಹೂವು ನೀನಾಗಿರುವೆ
ಪತಂಗವಾಗಿ ಹಾರಿ ಬರುವೆ
ಬಂದು ಪರಿಮಳ ಹೀರುವೆ
ಸಂತಸಕ್ಕೆ ಬಾನಲ್ಲಿ ಹಾರಾಡುವೆ
ದಿಗ್ವಿಜಯ
ನಾನು ಪುಸ್ತಕ ಪ್ರಿಯ
ಕವನಗಳ ರಚಿಸುವ ಕಾಯ
ಇಲ್ಲಿ ಏಕಾಂಗಿಯಾದರೂ ಸಂತಸಮಯ
ಉದಯೋನ್ಮುಖ ಕವಿಯಾಗಿ ದಿಗ್ವಿಜಯ
ಸುಕೃತ
ಸರ್ವರೂ ಹಚ್ಚಿ ಬೆಳಗಿರಿ ಹಣತೆ
ಅದು ಬೆಳಗಿ ಬಾರದಿರಲಿ ನಾಡಿಗೆ ನ್ಯೂನ್ಯತೆ
ಬಾಳಲ್ಲಿ ಬೆಳಕು ಚೆಲ್ಲಿ ಸುಖವಾಗಿಲಿ ಜನತೆ
ಸುಕೃತವಾದ ಈ ಹಬ್ಬಕ್ಕೆ ನೀಡಿ ಮಾನ್ಯತೆ
- ಕೆ.ಹೆಚ್. ಜಯಪ್ರಕಾಶ್, ಚಿತ್ರದುರ್ಗ