1】ಪ್ರೇಮ

ಪ್ರೇಮವೆಂದರೆ…..
ಕ್ಯಾಲೆಂಡರಿನೊಂದಿಗೆ
ದಿನಾಂಕ ಗುರುತಿಸಿ
ಗುಲಾಬಿ ಹೂ ಕಿತ್ತು
ಮಂಡಿಯೂರಿ ಕೇಳಿಕೊಳ್ಳುವ, ಬೇಡಿಕೊಳ್ಳುವ
ನಿವೇದನೆಯಲ್ಲ..!
ಎಲ್ಲ ಕಾಲಕ್ಕೂ
ಮಿಡಿದು ತುಡಿಯುವ ಸ್ವಚ್ಛದಿ ಕಂಗೊಳಿಸುವ ನಿನ್ನಯ
ನಿರ್ಮಲ ಭಾವ..!

ಪ್ರೇಮವೆಂದರೆ….
ಅರ್ಧರಾತ್ರಿಯಲಿ
ನಶೆ ಬೀಜ ತುಂಬಿಕೊಂಡು ನಿರ್ಮಲವೆಂಬ
ಸಭ್ಯತೆಯ ಗೆರೆ ದಾಟಿ ಹದ್ದು ಮೀರಿ
ಕುಣಿಯುವುದಲ್ಲ..!
ತಂತಾನೇ ಸೃಜಿಸಿ
ಕಂಗಳೊಳಗೆ
ಸರಿದಾಡುವ, ಸರಿದೂಗುವ ನಿನ್ನ
ಅಭಿವ್ಯಕ್ತವಾದ ಭಾಷೆ !

ಪ್ರೇಮವೆಂದರೆ….
ನಿಗದಿಯಾದ ಬೆಲೆಗೆ
ತಕ್ಕಷ್ಟು ತೂಗುವ
ಸಂತೆಯೊಳಗಣ ವಸ್ತುವೆಂಬಂತೆ ಭಾವಿಸುವ
ಸಾಮಗ್ರಿಯಲ್ಲ !
ಫಲ ನಿರೀಕ್ಷಿಸದೆಯೆe
ಬಲವಾಗೊಳ್ಳುವ ನಿನ್ನಯ
ನಿರಾಕಾಂಕ್ಷ ನಿರಪೇಕ್ಷ ಕ್ರಿಯೆ
—————————————-

2】ಹೆಣ್ಣೆಂಬ ಕಾಮಧೇನು ಕಲ್ಪವೃಕ್ಷ

ನೀ ಅಬಲೆ ಅಲ್ಲ, ತಾಯಿ ಸಬಲೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದು ಮಾದರಿಯಾದೆ ತೊಟ್ಟಿಲು ತೂಗುವ ಕೈ ಇಡೀ ಜಗತ್ತನ್ನೆ ಆಳಬವುದೆನ್ನುವುದನ್ನು ಸಾಬೀತು ಪಡಿಸಿದೆ !!

ಸಂದಿಗ್ಧ ಸಂದರ್ಭ ಬಂದಾಗ ತೂಡೆ ತ‌ಟ್ಟಿ ಮೀಸೆ ತಿರುವುವವರ ಮುಂದೆ ಕಚ್ಚೆ ಕಟ್ಟಿ ಸೆರಗು ಬಿಗಿದು ಬಂಡಿ ಕಟ್ಟಿ ನೇಗಿಲು ಇಡಿದು ಭೂಮಿ ಉಳುವ ಕೃಷಿಕಳಾಗಿ ಅಪ್ಪಟ ಅನ್ನದಾತೆಯಾದೆ !!

ಹುಟ್ಟಿನಿಂದ ತಂದೆ-ತಾಯಿ ಸೇವೆ ಗೈದೆ ಹರೆಯದ ತುಂಬು ತರುಣೆಯಾದ ಮೇಲೆ ಧೃತಿಗೆಡದೆ ಮನೆಯ ಗೌರವ ಕಾಪಾಡಿ ಜವಬ್ದಾರಿ ನೀಗಿಸಿದೆ !!

ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಕಾಯಕಯೋಗಿಯಾಗಿ ಗಂಡನ ಸೇವೆ ಮಾಡಿ ಮಕ್ಕಳು ತರುಣರಾಗುವವರೆಗೂ ಅವರೆಲ್ಲರನ್ನ ಪೋಷಿಸಿ ಆರೈಕೆ ಮಾಡಿದೆ !!

ಹೆಣ್ಣಿಗೆ ಪ್ರಾಣಕ್ಕಿಂತ ಮಾನವೆ ಆಭರಣ ಎಂಬಂತೆ ನಿನ್ನ ಪವಿತ್ರತೆಗೆ ಧಕ್ಕೆ ಬಂದಾಗ ಹೋರಾಡಿ ಪ್ರಾಣ ಚೆಲ್ಲುವೆ ವಿನಃ ಮಾನ ಕಳೆದುಕೂಳ್ಳದ ಕಡ್ಲಿಮಟ್ಟಿಯ ಕಾಶಿಬಾಯಿ ಯಾದೆ !!

ಮೈ ಚರ್ಮ ಸೂಕ್ಕುಗಟ್ಟಿ ಮುಪ್ಪು ಆವರಿಸಿದ ಮೇಲೆ ಫಲ ಕೊಡುವ ಮರವಾಗದಿದ್ದರೂ ನೆರಳು ಕೊಡುವ ಹೆಮ್ಮರವಾದೆ ತಾಳ್ಮೆ ಸಹನಾನುಭೂತಿಗೆ ಹೆಸರುವಾಸಿಯಾದೆ !!

ತಾಯಿ ನಮಗೆ ಆಸರೆಯೇ ವಿನಃ ಬೇಸರವಲ್ಲ, ಚಿರಂಜೀವಿ ಎಂಥಾ ದೇವಾನು ದೇವತೆಗಳಿಗೂ ಸೂರ್ಯ-ಚಂದ್ರರಿಗೂ ನೀ ಸರಿಸಾಟಿಯಿಲ್ಲದೆ ಶಾಶ್ವತವಾಗಿ ಅಜರಾಮರವಾಗಿ ಉಳಿದೆ !!!!..
———————————————

3】ನನ್ನ ಹೆತ್ತವ್ವ

ಹುಟ್ಟುತ್ತಿರುವಾಗಲೆ ಹುಟ್ಟಿದಾಕ್ಷಣ ಬಾಯಿಂದ ಬರುವ ಮೊದಲ ನುಡಿಯೇ ಅಮ್ಮ ಕೊನೆಗೆ ನಾವು ಹೋಗುವಾಗ ಬರುವ ಕೊನೆಯೇ ಪದವೇ ಅಮ್ಮ ಇರುವಾಗ ಬೇರೆ ಇನ್ನಾವ ಮಂತ್ರಾಕ್ಷರ ಬೇಕು ಈ ಜಗಕೆ

ಬದುಕಿರುವಾಗ ಬದುಕುವಾಗ ಪ್ರತಿಯೊಂದರಲ್ಲೂ ಅಮ್ಮನ ಆಶೀರ್ವಾದ, ಅಮ್ಮನ ಧೈವ ಶಕ್ತಿ ಇರುವಾಗ ಇನ್ಯಾವ ನರರಿಗೂ ಇನ್ನಾವ ದುಷ್ಟ ಶಕ್ತಿಗೂ ತಲೆ ಬಾಗುವ ಹಂಗು ನನಗೇಕೆ..?

ನಮ್ಮ ಬಾಳ ಬದುಕಿನಲ್ಲಿ ಬಿದ್ದು ಸೋತಾಗ ನಲುಗುವ, ಇಲ್ಲಾ ಸೋತು ಗೆದ್ದಾಗ ನಗೆ ಬೀರಿ ಬೀಗುವ ಎಳ್ಳಷ್ಟೂ ಕಲ್ಮಶವೇ ಇಲ್ಲದ ಅಮ್ಮನ ಪ್ರೀತಿ ಇರುವಾಗ ಅನ್ಯ ಕ್ಷಣಿಕ ದೈಹಿಕ ಸುಖದ ಸ್ವಾರ್ಥ ಪರಸ್ರ್ತೀಯಳ ಪ್ರೀತಿ ನನಗೇತಕೆ..?

ಹಸಿದಾಗ ಉಣಿಸುವ, ಮಳೆ-ಬಿಸಿಲಿಗೆ ಸೆರಗೋದಿಸುವ, ಪುಟ್ಟ ಹೆಜ್ಜೆಯನಿಟ್ಟು ನಡೆಯುವಾಗ ತನ್ನ ಕಂಕುಳದಲ್ಲಿ ಇರಿಸಿಕೊಳ್ಳುವ ಅತ್ತಾಗ ಅಮೃತದಿ ಎದೆಯಾಲುಣಿಸಿ ರಮಿಸುವ ಅಮ್ಮನ ಅಧ್ಭುತ ಶಕ್ತಿ ಇರುವಾಗ ಹಿಂಜರಿಕೆಯು ನನಗೇತಕೆ..?

ಮುಂದಿನ ನನ್ನ ಜೀವನದ ಪಯಣದಲಿ ಅಮ್ಮನ ಹಿತಬಲ, ಹಿತವಚನ, ಆರೈಕೆ, ಮಾರ್ಗದರ್ಶನ ಒಂದಿದ್ದರೆ ಸಾಕು ಸಾಧನೆಯ ಮೆಟ್ಟಿಲ್ಲನ್ನ ಏರಿ ಅಮ್ಮನ ಹೆಬ್ಬಯಕೆಯನ್ನ ಈಡೇರಿಸಿ ತಾಯಿಗೆ ತಕ್ಕ ಮಗ ನಾಗುವೆ ಇದರಲ್ಲಿ ಸಂದೇಹ ನಿಮಗೇಕೆ !!..

4】ಪ್ರೀತಿಯ ಪರಿಪಕ್ವತೆ

ಪ್ರೀತಿ ಅನ್ನೋದು ಅದೊಂದು ದಿವ್ಯ ಬೆಳಕು, ದೈವ ಶಕ್ತಿಯ, ಚೈತನ್ಯವಿದ್ದಂತೆ ಅರಿತು ನಡೆದರೆ ಬಾಳೆ ಚೋಕ್ಕ ಬಂಗಾರ ಅರಿಯದೆ ನಡೆದರೆ ಬಾಳೇ ಬಲು ಬರಿದಾದ ಖಾಲಿ ಬಂಜರು ಭೂಮಿ!,

ಪ್ರೀತಿಯಲ್ಲಿ ಸ್ವಾರ್ಥ ಇರದೆ ನಿಸ್ವಾರ್ಥಿಯಾಗಿರು ಆಸೆಯೆಂಬ ದೇಹಕ್ಕೆ ಮಹತ್ವವಿರದ ದೇಹಕ್ಕೆ ಸೀಮಿತವಿರದ ಪ್ರೀತಿ ಅದು ಚಿರಸ್ಮರಣೆಯಂತೆ ಅಮರ ಅಜರಾಮರ !

ಪ್ರೀತಿ ನಂಬಿಕೆಯೆಂಬ ಭಾವನೆಗಳ ಸಾಗರ ವಿಶ್ವಾಸದ ಶಿಖರ ಅದರಲ್ಲಿ ಬೇರಸಬೇಡಿ ಸಂದೇಹದ ಕೆಟ್ಟ ಬೀಜವನ್ನು ಕಡಿದು ಬಹುದೂರ ಕಿತ್ತೆಸೆಯಿರಿ ಜೀವನವನ್ನೇ ನರಕವನ್ನಾಗಿ ಸೃಷ್ಟಿಸುವ ಅನುಮಾನವೆಂಬ ಹೆಮ್ಮರವನ್ನು!

ಪ್ರೀತಿ ಒಂದುಗೂಡಿಸುವ ಶಕ್ತಿಯೇ ವಿನಃ ಜೋತೆಗಿರುವವರನ್ನ ಜೋತೆಗಿದದ್ದನ್ನ ಬೆರ್ಪಡಿಸುವುದಲ್ಲ, ಅದೊಂದು ಎಲ್ಲರಲ್ಲಿ ಒಳ್ಳೆಯ ಸಂಬಂಧ ಬೆಳೆಸುವ ಒಗ್ಗಟ್ಟಿನ ಪ್ರತೀಕ !,

ಪ್ರೀತಿಯಲ್ಲಿ ಮೋಸ, ದ್ರೋಹ ಇರಲ್ಲ, ಅದನ್ನ ಸೃಷ್ಟಿಕೊಳ್ಳೋದೆ ನಾವೇ ವಿನಃ ಇನ್ನಾರು ಅಲ್ಲ, ಪ್ರೀತಿಯ ಹೆಸರಿನಲ್ಲಿ ಜೀವ ಕಳೆದುಕೊಳ್ಳೋದಕ್ಕಿಂತ ಪ್ರೀತಿ ತ್ಯಾಗ ಮಾಡಿ ಪ್ರೀತಿ ಮಧುರ ತ್ಯಾಗ ಅಮರ !

ಪ್ರೀತಿಯ ಹೆಸರಿಗೆ ನಾವೆ ಕಳಂಕಿತರೆ ವಿನಃ ಪ್ರೀತಿಯೊಂದು ನಿಷ್ಕಲ್ಮಶ, ನಿರ್ಮೋಹಿ, ನಿರ್ದೋಹಿ, ನಿಷ್ಕಳಂಕ ನಿರ್ಭೀತ, ನಿಸ್ವಾರ್ಥವಾದದ್ದು ಪ್ರೀತಿಗೆ ಸರಿಸಾಟಿಯಾದದೊಂದಿದೆ ಅದೇ ಇನ್ನೊಂದಿಲ್ಲ, ಮತ್ತೊಂದಿಲ್ಲ, ಮೋಗದೊಂದಿಲ್ಲ, ಇರೋದೊಂದೆ ಪ್ರೀತಿ !!..
—————————————

5】ಯಾರನ್ನೂ ಕಡೆಗಣಿಸದಿರು
ಯಾರಿಗೆ ಗೊತ್ತು?
———————————————-
ಯಾರಿಗೆ ಗೊತ್ತು?
ನಿಮ್ಮನ್ನು ಕೀಳಾಗಿ ಕಂಡವರೇ
ನಿಮ್ಮ ಮನೆ ಬಾಗಿಲಿಗೆ ಆಳಾಗಿ ಬರಬಹುದು, ನಿಮ್ಮ ಕಾಲು ಎಳೆದವರೇ
ನಿಮ್ಮ ಮುಂದೆ ಬಂದು ಕೈ
ಮುಗಿಯಬಹುದು !!

ಯಾರಿಗೆ ಗೊತ್ತು
ನಿಮಗೆ ಕಲ್ಲು ಎಸೆದವರೇ
ನಿಮ್ಮ ಹಾದಿಗೆ ನಿಂತು ಹೂವು ಚೆಲ್ಲಬಹುದು, ನಿಮ್ಮ ಏಳಿಗೆ ಸಹಿಸದವರೇ
ನಿಮ್ಮ ಸಾಧನೆಗೆ ನಿಂತು
ಏಣಿಯಾಗಬಹುದು !!

ಯಾರಿಗೆ ಗೊತ್ತು?
ನಿಮ್ಮನ್ನು ನಿಂದಿಸಿದವರೇ
ನಿಮ್ಮ ಬಗ್ಗೆ ನಿಂಬಂಧನೆಯನ್ನು ಬರೆಯಬಹುದು, ನಿಮ್ಮನ್ನು ಖಂಡಿಸಿದವರೇ
ನಿಮ್ಮ ಕೈಗಳನ್ನು ಹಿಡಿದುಕೊಂಡು ನಡೆಯಬಹುದು !!

ಯಾರಿಗೆ ಗೊತ್ತು?
ನಿಮ್ಮನ್ನು ಅಪಪ್ರಚಾರ ಮಾಡಿದವರೇ
ನಿಮ್ಮ ಸಲುವಾಗಿ ಬೀದಿಗೆ ಹೋಗಿ ಪ್ರಚಾರ ಮಾಡಬಹುದು, ಅವಮಾನ ಮಾಡಿದವರೇ
ನಿಮ್ಮ ಸನ್ಮಾನಕ್ಕಾಗಿ ನಿಮ್ಮ ದಾರಿಯನ್ನು ಕಾಯಬಹುದು !!..
”””””””””””””””””””””'””””””””””””””””””””””’
ರಚನೆ: ✍️ ರಾಘವೇಂದ್ರ ಎಚ್. ಹಳ್ಳಿ, ಕೊಪ್ಪಳ(ತಾಳಕೇರಿ)