ಅನುಭವಿಸು

ಕಾಲ ನಮಗಾಗಿ ಕಾಯಲ್ಲ
ನಾವು ಕಾಲಕ್ಕೆ ಕಾಯಬೇಕಲ್ಲ
ಸಮಯ ಹೋದ ಮೇಲೆ ಫಲವಿಲ್ಲ
ಇದ್ದಾಗ ಅರಿತು ಬಾಳಬೇಕಲ್ಲ

ಗಡಿಯಾರದ ಬಡಿತದಂತೆ ಬದುಕು
ಹೃದಯ ಬಡಿತ ಇರುವ ತನಕ ಬದುಕು
ನಾನು ನೀನು ಎನ್ನುವ ಬದುಕು
ಸರಿಯಾಗಿ ಬಳಸಿ ಬಾಳಬೇಕು

ಗೇಣು ಹೊಟ್ಟೆ ತುಂಬಲು ಬಂದು
ತಂಬಿಗೆ ನೀರು ಕುಡಿಯಲು ಬಂದು
ಕೈ ಕಟ್ಟಿ ಕುಳಿತರೆ ಏನು ಬಂದಿದ್ದು
ಕಳೆದು ಹೋಗುವ‌ ಮುನ್ನ ಅರಿತಿದ್ದು

ಇರುವಾಗ ಸಾಧಿಸಿ ಅನುಭವಿಸಿ ನೋಡು
ಸಮಯದ ಸೂತ್ರನಂತೆ ಇದ್ದು ನೋಡು
ಚಿಂತಿಸಿ ಫಲವಿಲ್ಲ ಯೋಚಿಸಿ ಸದುಪಯೋಗ ನೋಡು
ದೊಡ್ಡವರ ಮಾತು ತಿಳಿದು ನೋಡು

ಬೋಗಸೆ ನೀರು ಖಾಲಿ ಆದಂತೆ ಜೀವನ
ಗಡಿಯಾರದ ಮುಳ್ಳು ಓಡಿದಂತೆ ಜೀವನ
ಸಕಲ ಜೀವರಾಶಿಗೂ ನೀರಿನಿಂದಲೇ ಜೀವನ
ಉಳಿಸಿ ಬೆಳೆಸಿ ಪ್ರಕೃತಿ ರಕ್ಷಿಸಿ ಕಾಲದೊಂದಿಗೆ

– ಕು. ಕವಿತಾ ಎಂ. ಮಾಲಿ ಪಾಟೀಲ