ಪ್ರೇಮ 💞
ಪ್ರೇಮವೆಂದರೆ ””””’
ಕ್ಯಾಲೆಂಡರಿನೊಂದಿಗೆ
ದಿನಾಂಕ ಗುರುತಿಸಿ
ಗುಲಾಬಿ ಹೂ ಕಿತ್ತು
ಮಂಡಿಯೂರಿ ಕೇಳಿಕೊಳ್ಳುವ, ಬೇಡಿಕೊಳ್ಳುವ
ನಿವೇದನೆಯಲ್ಲ !
ಎಲ್ಲ ಕಾಲಕೂ
ಮಿಡಿದು ತುಡಿಯುವ ಸ್ವಚ್ಚದಿ ಕಂಗೊಳಿಸುವ ನಿನ್ನಯ
ನಿರ್ಮಲ ಭಾವ !

ಪ್ರೇಮವೆಂದರೆ ””””’💞
ಅರ್ಧರಾತ್ರಿಯಲಿ
ನಶೆ ಬೀಜ ತುಂಬಿಕೊಂಡು ನಿರ್ಮಲವೆಂಬ
ಸಭ್ಯತೆಯ ಗೆರೆ ದಾಟಿ ಹದ್ದು ಮೀರಿ
ಕುಣಿಯುವುದಲ್ಲ !
ತಂತಾನೇ ಸೃಜಿಸಿ
ಕಂಗಳೊಳಗೆ
ಸರಿದಾಡುವ, ಸರಿದೂಗುವ
ಅಭಿವ್ಯಕ್ತವಾಗುವ ಭಾಷೆ !

ಪ್ರೇಮವೆಂದರೆ ””””’💞
ನಿಗದಿಯಾದ ಬೆಲೆಗೆ
ತಕ್ಕಷ್ಟು ತೂಗುವ
ಸಂತೆಯೊಳಗಿನ ವಸ್ತುವೆಂಬಂತೆ ಭಾವಿಸುವ
ಸಾಮಗ್ರಿಯಲ್ಲ !
ಫಲ ನಿರೀಕ್ಷಿಸದೆಯೆe
ಬಲಗೊಳ್ಳುವ ನಿನ್ನಯ
ನಿರಾಕಾಂಕ್ಷ ನಿರಪೇಕ್ಷ ಕ್ರಿಯೆ
————————

ರಾಘು ಎಚ್. ಹಳ್ಳಿ, ಕೊಪ್ಪಳ