ಸಾಲಗಾರನ ಚಿಂತೆಯಾಗಿದೆ ನನಗೆ
ಕಾಲ್ಬೆರಳಿನಿಂದ ತಲೆವರೆಗೆ ಅಲಂಕಾರ
ಮಣಗಟ್ಟಲೆ ಉಡುಗೆ ತೊಡುಗೆ ಬಂಗಾರ
ವಜ್ರ ವೈಢೂರ್ಯ ಮಾಣಿಕ್ಯ ರತ್ನದ ಹಾರ
ಜನರಾಡುವರು ಅವನೊಬ್ಬ ಸಾಲಗಾರ
ಸಾವಿರಾರು ವರ್ಷಗಳ ಕಾದ ಕುಬೇರ
ಇನ್ನೂ ಉತ್ತರ ಕೊಡುತ್ತಿಲ್ಲ ವೆಂಕಟೇಶ್ವರ
ಭಕ್ತರು ನೀಡಬೇಕಿದೆ ಈಗ ಪರಿಹಾರ
ನನಗೆ ಚಿಂತೆಯಾಗುತಲಿದೆ ಜಗದೀಶ್ವರ
ನಾನು ಬಡವಿ ಕೊಡುವೆ ಕೇವಲ ಆಹಾರ
ದೇವಾ ಬೇಕಿತ್ತೆ ನಿನಗೆ ಎರಡೆರಡು ಲಗ್ನ
ಇಬ್ಬರೂ ಸನಿಹ ಇಲ್ಲ ಹೊಟ್ಟೆಗತಿ ಏನು
ಬೇಗ ಸಾಲ ಮುಟ್ಟಿಸಿ ಬಾರೊ ತಿಮ್ಮಪ್ಪ
✍️ ಅನ್ನಪೂರ್ಣ ಸಕ್ರೋಜಿ ಪುಣೆ