ಕಾಲದ ಗಮ್ಮತ್ತು
ಕೈಯ ಗಡಿಯಾರದಿಂದ ಸಮಯ ಜಾರುತ್ತಿದೆಯಂತೆ,
ಅದನ್ನ ಹಿಡಿದಿಟ್ಟಿಕ್ಕೂ ಕೈಯಿಂದ ಜಾರದಂತೆ,
ಕಳೆದ ಸಮಯ ಮತ್ತೆಂದು ಸಿಗಲಾರದಂತೆ,
ಮರೆತು ಬಾಳಿದರೆ ಜೀವನವೇ ಶೂನ್ಯವಂತೆ
ಕ್ಷಣ ಕ್ಷಣವೂ ಸೋರುತಿಹ ಸಮಯವಂತೆ,
ಸರಿದು ಹೋಗುವ ಮುನ್ನ ಸದ್ವಿನಿಯೋಗ ವಾಗುವಂತೆ,
ಅನುದಿನವೂ ಮಾಡು ನೀ ಜಗದ ಚಿಂತೆ,
ನಿನ್ನ ಕೈಲಾದ ಸಹಾಯ ಹಸ್ತವಂತೆ
ಕಳೆದ ಸಮಯದ ಸಾರ್ಥಕ ಮಾಡಿಕೋ,
ಅನ್ಯರಿಗೆ ಸಹಾಯ ಮಾಡುವ ಮೂಲಕ,
ಜೀವನದಿ ಎಲ್ಲವೂ ದೈವ ನಿಯಾಮಕ,
ಸದ್ಬಳಕೆ ಆಗಲಿ ವರ್ತಮಾನದ ಕಾಯಕ
ಸಮಯವು ಅತ್ಯಮೂಲ್ಯ ನಿಧಿಯಂತೆ,
ಸಾಗರದ ಅಲೆಗಳ ಏರಿಳಿತದಂತೆ,
ಮಿಂಚಿ ಹೋದದ್ದಕ್ಕೆ ಚಿಂತಿಸಿ ಫಲವಿಲ್ಲವಂತೆ,
ಕಳೆದು ಹೋದರೆ ಮತ್ತೆಂದು ಸಿಗಲಾರದ ಸೃಷ್ಟಿಯಂತೆ.
- – ರವೀಂದ್ರ ಸಿ.ವಿ. ವಕೀಲರು, ಮೈಸೂರು