ಈ ದಿನದ ಪ್ರಶ್ನೆಗಳು
1- ಜೋಗತಿ ಮಂಜಮ್ಮನವರ ಹುಟ್ಟೂರು ಯಾವುದು?
2- ಮಂಜಣ್ಣವರ ತಾಯಿಯ ಹೆಸರನ್ನು ತಿಳಿಸಿ?
3- ಇವರು ಜೋಗತಿ ನೃತ್ಯವನ್ನು ಯಾವ ಶಿಕ್ಷಕಿಯರ ಬಳಿ ಕಲಿತರು?
4- ಇವರು ಭಾರತದ ಯಾವ ಅತ್ಯುನ್ನತ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ?
5- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಯಾವ ವರ್ಷ ಪಡೆದುಕೊಂಡಿದ್ದಾರೆ?
6- ಶ್ರೀಯುತರ ಮೂಲ ಹೆಸರನ್ನು ತಿಳಿಸಿರಿ?
7- ಇವರ ಆತ್ಮಕಥನವನ್ನು ತಿಳಿಸಿರಿ?
8- ಮಂಜಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿಗಳು ಯಾರು?
9- ಇವರು ಯಾವ ಸಂಸ್ಥೆಯ ಅಧ್ಯಕ್ಷರಾಗಿದ್ದರು?
10- ಮಂಜಮ್ಮನವರು ಜೋಗತಿಯಾಗಿ ದೀಕ್ಷೆ ಸ್ವೀಕಾರ ಮಾಡಿದ ಸ್ಥಳ ಯಾವುದು?
ಈ ದಿನದ ಉತ್ತರಗಳು
1- ಬಳ್ಳಾರಿ ಜಿಲ್ಲೆಯ ತಗ್ಗಿನಮಠ
2- ಜಯಲಕ್ಷ್ಮಿ
3- ಕಾಳವ್ವ ಜೋಗತಿ
4- ಪದ್ಮಶ್ರೀ
5- 2010
6- ಮಂಜುನಾಥ್ ಶೆಟ್ಟಿ
7- ಫ್ರಮ್ ಮಂಜುನಾಥ ಟು ಮಂಜಮ್ಮ
8- ರಾಷ್ಟ್ರಪತಿ ರಾಮನಾಥ್ ಕೋವಿಂದ್
9- ಕರ್ನಾಟಕ ಜಾನಪದ ಅಕಾಡೆಮಿ
10- ಹುಲಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನ