ದೇವರಾಟ
ಹುಸಿ ನಗೆಯ ಬೀರುತಲಿ
ಹಸುಗೂಸು ತೊಟ್ಟಿಲಲಿ
ಕಿಲ ಕಿಲ ನಗುತಲಿ
ಚಿಟ್ಟನೇ ಚೀರುತಲಿ
ತನ್ನ ತಾ ಮರೆಯುತಲಿ
ನಿದ್ರಿಸುತಿಹ ಕೂಸ ಕಂಡು
ನಗು ಮೊಗದಿ ಅವ್ವ ಎಂದಳು
ಇದು ದೇವರಾಟ
ತನ್ನ ಮುಷ್ಟಿಯ ಮಡುಚಿ
ಬಡಿವ ಪುಟ್ಟ ಕರಗಳು
ಡಬ ಡಬನೆ ಬಡಿವ
ಪುಟ್ಟ ಪಾದವ ಕಂಡು
ತನ್ನ ಕೋಪದಿ ತಾನೇ ಅಳುತ
ನಿದ್ರಿಸುತಿಯ ಕೂಸಕಂಡು
ನಗು ಮೊಗದಿ ಅವ್ವ ಎಂದಳು
ಇದು ದೇವರಾಟ
ಮುದ್ದು ಮುಖದಿ
ಕೆಂಪರಂಗೀರಿಸಿ ಕೊಂಡು
ಹುಬ್ಬು ಗಂಟಿಕ್ಕಿ ಸಿಟ್ಟಿನಿಂದ
ಅರುಚಿದಾಕ್ಷಣ ಓಡಿ ಬಂದು
ಕಂದನ ಅಪ್ಪುತಾಕ್ಷಣ
ನಗು ಮೊಗದಿ ಅವ್ವ ಎಂದಳು
ಇದು ದೇವರಾಟ
ಬಿಕ್ಕಿ ಬಿಕ್ಕಿ ಹೊರಳಿ
ನಗು ನಗುತಾ ತೆವಳಿ
ತೊಟ್ಟಿಲಲ್ಲಿ ನಿದ್ದೆಗಣ್ಣಲಿ
ತನ್ನ ಕೆನ್ನೆಯ ಪರಚಿ ಕೊಂಡು
ಕೂಗಿ ಕರೆದ ಕಂದನಲ್ಲಿಗೆ ಬಂದು
ನಗು ಮೊಗದಿ ಅವ್ವ ಎಂದಳು
ಇದು ದೇವರಾಟ
- ರಚನೆ: ಇಂದಿರಾ ಲೋಕೇಶ್, ಹಾಸನ