ಇಷ್ಟೇ ಸಾಕು

ಎಲ್ಲರೆದುರು ಸುಂದರವಾಗಿ ನಾವು ಕಾಣ ಬೇಕಿಲ್ಲ,
ನಮ್ಮ ಸುಂದರವಾದ ಮನಸು ಎಲ್ಲರಿಗೂ ಕಂಡರೆ ಸಾಕು;
ಎಲ್ಲರೆದುರು ಭಾರೀ ಮಾತನಾಡ ಬೇಕಿಲ್ಲ
ಮೌನವಾಗಿ ಮುಗುಳ್ನಕ್ಕರೂ ಸಾಕು;
ಎಲ್ಲರಿಗೂ ನಾವು ಅರ್ಥವಾಗ ಬೇಕಿಲ್ಲ,
ಅರ್ಥವಾದವರು ನಮ್ಮನ್ನು ಒಪ್ಪಿಕೊಂಡರೆ ಸಾಕು;
ಎಲ್ಲರಿಗೂ ನಾವು ಇಷ್ಟವಾಗಬೇಕಿಲ್ಲ,
ಇಷ್ಟ ಇರುವವರಿಗೆ ನಮ್ಮಿಂದ ನೋವಾಗದಿದ್ದರೆ ಸಾಕು;
ಎಲ್ಲರೆದುರು ನಾವು ಬುದ್ದಿವಂತರಾಗ ಬೇಕಿಲ್ಲ,
ಎಲ್ಲ ತಿಳಿದವರೆದುರು ದಡ್ಡರಾಗದಿದ್ದರೆ ಸಾಕು;
ಎಲ್ಲರೂ ನೋಡಿ ನಗುವರೆನ್ನ ಬೇಕಿಲ್ಲ,
ನೋಡಿ ನಗುವವರಿಗೂ ನಾವು ಹಗುರಾಗದಿದ್ದರೆ ಸಾಕು|
ಎಲ್ಲರೂ ನಮ್ಮನ್ನೇ ಗಮನಿಸುತ್ತಾರೆನ್ನ ಬೇಕಿಲ್ಲ
ನಮ್ಮ ಗುರಿಯ ಕಂಡು ಸುಮ್ಮನೆ ನಮನ ಸಲ್ಲಿಸಿದರೆ ಸಾಕು |

✍️ಮುಕ್ತಮನಸು