Table of Contents

ಶಿವರಾತ್ರಿ ಮಹಾಕಾಲ

ಕೈಲಾಸದಿಂದಿಳಿದಿಂದು ಭುವಿಗೆ
ಬಂದವನೇ
ಡಮರುಗ ಬಾರಿಸುತ ಬಾಗಿಲಿಗೆ
ನಿಂದವನೇ
ಶಂಭೋ ಹರಹರ ಮಹಾದೇವಾ
ಓಂನಮಃಶಿವಾಯ
ನಿನಗೇನು ನೀಡಲಿ ಕಾಲಾತೀತನೆ
ಬಡವಳು ನಾನು
ಅಜ್ಞಾನಿ ನಾನು ಉಪವಾಸ ಗೊತ್ತಿಲ್ಲ
ಓದಿಲ್ಲ ಕಲಿತಿಲ್ಲ
ಅಧ್ಯಾತ್ಮಿಕಳೂ ನಾನಲ್ಲ ಜಂಬಡಂಭ
ನನಗೆ ಗೊತ್ತಿಲ್ಲ
ಕಾಯಕವೇ ಕೈಲಾಸವೆನುವೆ ಸುಳ್ಳು
ಮೋಸ ನನ್ನಲ್ಲಿಲ್ಲ
ನಿನಗೇನು ನೀಡಲಿ ಮಹಾಕಾಲನೇ
ಬಡವಳು ನಾನು
ಮಕ್ಕಳು ರೈತರು ಉಪವಾಸದಿಂದ
ಸಾಯುತಿಹರು
ಧನವಂತರು ಸಾಹುಕಾರರು ತಿಂದು
ತೇಗಹುತಿಹರು
ಬರಿಮೈಯನಿನ್ನಬಂಗಾರತೊಟ್ಟಿಲಲಿ
ತೂಗುತಿಹರು
ಹೋಗು ನೀ ಅವರ ಬಳಿ ನಾನೇನು
ನೀಡಲಿ ಬಡವಳು
ಭೂಮಿ ಬಾಯ್ಬಿರಿದು ಆಕ್ರಂದನ
ಮಾಡುತಿಹಳು
ಸೂರ್ಯ ಕೆಂಡದುಂಡೆ ಭೂರಮೆಗೆ
ಉಗುಳುತಿಹನು
ಹನಿ ನೀರಿಗಾಗಿ ಪ್ರಾಣಿ ಮನುಷ್ಯ
ಜಗಳಾಡುತಿಹರು
ಶಿವಾ ಜಟೆ ಬಿಚ್ಚಿ ಗಂಗೆಯ ಹರಿಸು
ನಿನಗೆ ನೀಡುವೆ ಎಳ್ನೀರು

ಮಹಾಯೋಗಾಯೋಗ

ಏನು ಯೋಗಾಯೋಗವೊ ಇಂದು
ಶಿವರಾತ್ರಿ ಮಹಿಳಾದಿನ ಇಂದು
ದಿನ ರಾತ್ರಿಗಳೊಂದಾದ ಸುದಿನ
ಶಿವ ಚೈತನ್ಯ ಶಿವೆ ಅವನ ಶಕ್ತಿ
ಶಂಕರ ಸೃಷ್ಟಿಕರ್ತ ಅವಳು ಸೃಷ್ಟಿ
ಅವನು ಈಶ್ವರ ಇವಳು ಸಂಸಾರ
ಸ್ಥಿತಪ್ರಜ್ಞನವನು ಸ್ತುತಿಪ್ರಿಯಳಿವಳು
ನಿರಾಭರಣನವ ಆಭರಣಪ್ರಿಯಳು
ಎಂತಲೇ ಸತ್ಯಂ ಶಿವಂ ಸುಂದರಂ
ಮೌನಪ್ರಿಯನುಮಾತುಗಾರ್ತಿಇವಳು
ಶಾಂತನವನುಉತ್ಸಾಹಭರಿತ ಇವಳು
ಅದಕೆ ಗಂಡುಹೆಣ್ಣು ಸಮಸಮರ್ಥರು
– ಅನ್ನಪೂರ್ಣ ಸಕ್ರೋಜಿ ಪುಣೆ