ಪೊರೆಯೋ ಹರನೇ

ಹಿಮಗಿರಿಯ ಶಿಖರದೊಡೆಯ ಕೈಲಾಸದೀಶ್ವರನೇ
ಹಿತವು ಎನಗೆ ನಿನ್ನ ಮಡಿಲು
ಪೊರೆಯೋ ವಿಶ್ವೇಶ್ವರನೇ
ಅನಾಥನೆಂಬ ಭಯವು
ಇಂದೇ ದೂರವಾಗಲಿ
ಹರುಷದಿ ಎನ್ನ ಹರಸೋ ಹರನೇ

ಮನದ ದುಃಖ ದೂರಮಾಡಿ
ಪೊರೆಯೋ ಮಹಾದೇವನೇ
ನಿತ್ಯ ನಿನ್ನ ಮಂತ್ರ ಜಪವೇ ಎನಗೇ
ಶ್ರೀರಕ್ಷೆ ಪೊರೆಯೋ ವಿರೂಪಾಕ್ಷನೇ

ನಿನ್ನ ಜಡೆಯ ಅಡಿಯಲ್ಲಿರುವ
ಗಂಗೆಯೊಡನೆ ಆಡುವಾಸೆ
ಮನದ ಕೊಳೆಯ ದೂರ ಮಾಡಿ
ಪೊರೆಯೋ ಗಂಗಾಧರನೇ

ನಿನ್ನ ಶಿರದಿ ಧರಿಸಿರುವ
ಶಶಿಯೊಡನೆ ಆಡುವಾಸೆ
ಜ್ಞಾನದರಿವ ಬೆಳಕ ನೀಡಿ
ಪೊರೆಯೋ ಶಶಿಧರನೇ

ರಚನೆ: ಇಂದಿರಾ ಲೋಕೇಶ್, ಹಾಸನ