- ಗಂಭೀರ
ನಮ್ಮ ರಾಜ್ಯದ ವಿಶೇಷ ಚೇತನ ಇತರರನ್ನು ತಾತ್ಸಾರದಿಂದ ಕಾಣುತಿದೆ ಅಂಧ ಸರ್ಕಾರ. ಹಲವು ಭಾರಿ ಅವರು ತೆವಳಿಕೊಂಡು ಹೋಗಿ ನೀಡಿದ ಅಹವಾಲುಗಳಿಗೆ ಅಧಿಕಾರಿಗಳಿಂದ ನಕಾರ. ಪ್ರಸ್ತುತ ದಿನಮಾನದಲ್ಲಿ ಮಾಸಾಶನ 1,400 ನಿಷೇದಿಸಿದ ಕಾರಣ ಅಂಥವರ ಜೀವನ ಗಂಭೀರ. ಅಂಗವೈಕಲ್ಯತೆವಳ್ಳವರನ್ನು ಅನುಪಮ ಸ್ಥಿತಿಯಲ್ಲಿರಿಸಿದ ಸರ್ಕಾರಕ್ಕೆ ರಾಜ್ಯದಾದ್ಯಂತ ದಿಕ್ಕಾರ. ಪ್ರಜಾರಾಜ್ಯದಲ್ಲಿ ಅಂಥಾ ಪ್ರಜೆಗಳಿಂದ ಪ್ರತ್ಯಕ್ಷ ಪರೋಕ್ಷವಾಗಿ ಸರ್ಕಾರಕ್ಕೆ ಬಹಿಷ್ಕಾರ. ಇನ್ನು ಐದು ವರ್ಷಗಳ ಅವಧಿಯಲ್ಲಿ ಸರ್ಕಾರದ ಉಳಿವೋ ಅಳಿವೋ ಎಂಬುದು ಅರಿಯಲಿ ಎಚ್ಚರ.
- ಬಾಳ ದೋಣಿ
ಹಸನ್ಮುಖಿಯಾಗಿ ಇದ್ದವರು ಇಷ್ಟು ದಿಢೀರನೇ ನನ್ನನು ಅಗಲಿದೆಯೇಕೆ ದೊರೆಯೇ. ನಿಮ್ಮ ಶ್ರಮದಿಂದ ಸೌಖ್ಯವಾಗಿ ಬಾಳಿದ ನಾನು ಈಗ ನಿನ್ನ ಬಿಟ್ಟು ಹೇಗೆ ಬಾಳಲಿ ಹೇಳು ಪ್ರಭುವೇ. ಈ ನಿನ್ನ ಮೂರು ಹೆಣ್ಣು ಮಕ್ಕಳ ದುಃಖದ ಅಂತರ್ನಾದವ ಕೇಳಿ ಸಹಿಸಲಾರೆನು ಒಡೆಯಾ. ನಿನಗೆ ಏಕಿಷ್ಟು ಆತುರ ಇಂಥಾ ತೀರ್ವಗತಿಯಲ್ಲಿ ನನ್ನ ಬಿಟ್ಟು ಅಗಲಿದೆಯಲ್ಲಾ. ನಿನ್ನೊಡನೆ ಬೆರೆತು ಸ್ಪಂದಿಸಿದ ಆ ಸಿಹಿ ಕಹಿ ಘಟನೆಗಳು ಬಂದು ಅಪ್ಪಳಿಸುತಿವೆ ಒಡೆಯಾ. ಅಂಬಿಗನಾಗಿ ನೀನಿಲ್ಲದೇ ಈ ಬಾಳ ದೋಣಿ ಸಾಗುವುದು ಹೇಗೆ ಹೇಳು ಗೆಳೆಯಾ. ಕಪ್ಪು ಕಾರ್ಮೋಡಗಳು ಆವರಿಸಿ ಕತ್ತಲಾದಂತೆ ನನ್ನ ಬಾಳು ಕತ್ತಲಾಯಿತಲ್ಲಾ . ಬೀಸುವ ಬಿರುಗಾಳಿಗೆ ಬೆಳಕಾಗಿ ಬೆಳಗುತ್ತಿದ್ದ ಈ ಮನೆಯ ನಂದಾದೀಪ ಹಾರಿ ಹೋಯಿತಲ್ಲಾ. ಹೇ ದೇವಾ ಯಾರಲ್ಲಿ ಹಂಚಿ ಕೊಳ್ಳಲಿ ಈ ನನ್ನ ಕಷ್ಟ ದುಃಖದ ಕಣ್ಣೀರ ವ್ಯಥೆಯ. ಓ ವಿದಿಯೇ ಸಹಿಸಲಸಾಧ್ಯವಾದ ಸಂದಿಗ್ದ ಪರಿಸ್ಥಿತಿಗೆ ನನ್ನ ತಂದೊಡ್ಡಿದೆಯಲ್ಲಾ. ನನ್ನ ಮೇಲೇಕೆ ಕೋಪ ದೇವಾ ಕೊನೆಗೂ ನನಗೆ ವಿಧವೆಯ ಪಟ್ಟ ಕಟ್ಟಿ ಬಿಟ್ಟೆಯಲ್ಲಾ .
- ಅಲ್ಲೋಲ ಕಲ್ಲೋಲ
ಪ್ರಸ್ತುತ ದಿನಮಾನಗಳಲ್ಲಿ ಅನರ್ಘ್ಯ ರತ್ನಗಳಾದ ನ್ಯಾಯ ನೀತಿ ಸತ್ಯ ಧರ್ಮ ಅಹಿಂಸೆ ದಯೆ ಕರುಣೆ ಮುಂತಾದ ಸಂಸ್ಕಾರಗಳ ಹಗಹರಣ. ಅರಿಷಡ್ವರ್ಗಗಳ ದಾಸರಾಗಿ ರೋಷ ಆವೇಶ ಮೋಸ ವಂಚನೆ ದರ್ಪ ದೌರ್ಜನ್ಯ ಹಿಂಸೆ ದ್ವೇಷ ಅಸೂಯೆ ಹೊಟ್ಟೆಕಿಚ್ಚು ಮುಂತಾದವುಗಳ ಅನಾವರಣ. ಪ್ರಸ್ತುತ ನಮ್ಮ ಕೈ ಕಸುಬಗಳು ಪಥನಗೊಳ್ಳಲು ಚಾಲನೆಯಲ್ಲಿರುವ ಬಸ್ಸು ಲಾರಿ ಕಾರು ಸ್ಕೂಟರ್ ಇನ್ನು ಮುಂತಾದ ಯಾಂತ್ರಿಕ ವಸ್ತುಗಳೇ ಪ್ರಮುಖ ಕಾರಣ. ಹೆತ್ತವರು ತಮ್ಮ ಮಕ್ಕಳಿಗೆ ಸಾತ್ವಿಕ ಆಹಾರ ವಿದ್ಯಾ ಬುದ್ದಿ ಜ್ಞಾನ ಸುಸಂಸ್ಕಾರ ನೀಡದೇ ಟೀವಿ ಮೊಬೈಲ್ ವೀಕ್ಷಣೆಯಲ್ಲಿಯೇ ಕಾಲಹರಣ. ಇತ್ತೀಚೆಗೆ ಸರ್ಕಾರ ವಿಧವೆ ವಿಶೇಷ ಚೇತನ ವಯೋವೃದ್ಧರನ್ನು ದಿಕ್ಕರಿಸಿ ಸ್ವಾರ್ಥ ಸರ್ವ ಅಂಗಾಂಗವುಳ್ಳ ಪ್ರಜೆಗಳಿಗೆ ಅರ್ಥರಹಿತ ಬೇಡಿಕೆಗಳ ಅನಾವರಣ. ನಾಡಲ್ಲಿ ನಮ್ಮನು ಹೇಳುವ ಕೇಳುವರ್ಯಾರೂ ಇಲ್ಲವೆಂದರಿತು ತಾನು ಇಚ್ಚಿಸಿದ ಪಥದತ್ತ ಸಾಗುತ್ತಿದೆ ಶ್ರೀಮಂತ ವರ್ಗ ರಾಜಕಾರಣ. ಹೀಗೆ ಕಾರ್ಯ ನಿರ್ವಹಣೆಯಲ್ಲಿ ಅಲ್ಲೋಲ ಕಲ್ಲೋಲವುಂಟಾಗಿ ಕ್ಷೀಣಿಸುತ್ತಿದೆ ನಾಡಿನ ಸುಸಂಸ್ಕೃತಿ ಸಂಪ್ರದಾಯ ವೈಭವೀಕರಣ. ವರುಣ ಭುವಿಗೆ ಆಗಮಿಸಿದೆ ಮೌನವಹಿಸಿರುವ ಅಕಸ್ಮಾತ್ ಆತ ಅಬ್ಬರಿಸಿ ಬಿಬ್ಬಿರಿದು ಬಂದರೆ ನಿಷ್ಪಕ್ಷಪಾತದಿಂದ ನಾಡಿನ ಜನತೆ ಸರ್ವಸ್ವವೂ ಧ್ವಂಸೀಕರಣ. ಇಷ್ಟೆಲ್ಲಾ ಆದರೂ ಸಹ ಕೆಲವೆಡೆ ಸುರಕ್ಷಿತವಾಗಿದೆ ಎಲೆ ಮರೆಕಾಯಿಯಂತೆ ನಾಡಿನ ನ್ಯಾಯಾ ನೀತಿ ಸತ್ಯ ಧರ್ಮ ಸಂಸ್ಕೃತಿ ಸಾತ್ವಿಕ ಸಂಪ್ರದಾಯದ ವಾತಾವರಣ. ನೂತನವಾಗಿ ಬಿಡುಗಡೆಯಾಗುವ ಸ್ಣರಣ ಸಂಚಿಕೆಯಲ್ಲಿ ಮುದ್ರಣಕ್ಕಾಗಿ.
- ಬೇದ ಬಾವ
ರಾಜ್ಯದಾದ್ಯಂತ ಹಲವು ಬಡವರು ಪ್ರತಿಭೆಗಳು ವಿದ್ಯಾವಂತರು ವಿಶೇಷ ಚೇತನರಾಗಿ ಅನುಪಮ ಸ್ಥಿತಿಯಲ್ಲಿಹರು.ಇಂಥಃ ಪ್ರತಿಭೆಗಳು ಆಟೋಟಗಳಲ್ಲಿ ಬಾಗವಹಿಸಿ 2.3.ಚಿನ್ನದ ಪದಕಗಳ ಗೆದ್ದು ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸಿಹರು. ವಿಶೇಷ ಚೇತನರಲ್ಲಿಯ ಸಾಮರ್ಥ್ಯವ ಕಂಡು ಗುರುತಿಸಿ ಅವರ ಅಂಗ ವೈಕಲ್ಯತೆಯನ್ನಲ್ಲ ಇದನರಿಯಿರಿ ಸರ್ವರೂ ಚುನಾವಣೆಯಲ್ಲಿ ರಾಜ್ಯದ ಅಂಗವೈಕಲ್ಯರು ನಿಸ್ಸಹಾಯಕರಾದರೂ ಸಹ ಹಿಂಸೆ ಅನುಭವಿಸಿ ಮತ ಚಲಾಯಿಸಿಹರು. ಸರ್ಕಾರ ನೀಡುವ ಮಾಸಾಸನವು 1,400 ರೂ ಮಾಸದ ಖರ್ಚಿಗೆ ತೀರಾ ಅಲ್ಪವಾಗಿ ಚಿಂತೆಯಲ್ಲಿ ಮಗ್ನರಾಗಿಹರು. ವರುಷಕ್ಕೊಮ್ಮೆ ಬಸ್ಸ್ ಪಾಸಗೆ 660 ರೂ ತೆರಿಗೆ ವಿಧಿಸಿದರೂ ಸಹ 100 ಕಿಲೋ.ಮೀ. ಮಾತ್ರ ಪಯಣಕ್ಕೆ ನಿಗದಿ ಪಡಿಸಿಹರು. ಇಂಥಃ ನಮ್ಮ ವಿಶೇಷ ಚೇತನ ಪ್ರತಿಭಾವಂತರು ವಿದ್ಯಾವಂತರಿಗೆ ತಕ್ಕ ಸರ್ಕಾರಿ ನೌಕರಿ ಸಿಗದೇ ಕಂಗಾಲಾಗಿಹರು . ನಮ್ಮ ರಾಜ್ಯದ ವಿಶೇಷ ಚೇತನರು ಸರ್ಕಾರದ ಇಷ್ಟೆಲ್ಲಾ ಸೌಲಭ್ಯಗಳಿಂದ ವಂಚಿತರಾಗಿ ದಿಕ್ಕಿಲ್ಲದೇ ಪರಿತಪಿಸುತಿಹರು. ಪ್ರಸ್ತುತ ರಾಜ್ಯದ ಮಹಿಳೆಯರು 2,000 ಸಾವಿರ ಮಾಸದ ಭತ್ಯೆ ರಾಜ್ಯಾದ್ಯಂತ ಪಯಣಿಸಲು ಉಚಿತ ಬಸ್ಸ್ ಪಾಸ್ ಪಡೆದಿಹರು. ವಿಶೇಷ ಚೇತನರು ಸರ್ಕಾರದಿಂದ ಬೇದ ಬಾವ ಅಸಮಾಧಾನ ಅನ್ಯಾಯ ನಿರ್ಗತಿಕರಾಗಿ ಅವಮಾನಕ್ಕೀಡಾಗಿಹರು.
– ✍️ಕೆ ಎಚ್ ಜಯಪ್ರಕಾಶ್ ಚಿತ್ರದುರ್ಗ 9972433736