ಸೂತ್ರದಾರನ ಆಟ

ಬದುಕೆಂಬಾ ನಾಟಕರಂಗ
ಅದರಲ್ಲಿ ನಾವು ಪಾತ್ರಧಾರಿಗಳು ಮಾತ್ರ.

ನಮ್ಮನ್ನು ಆಡಿಸುವಾ
ಆ ಸೂತ್ರಧಾರ  ಆ ಭಗವಂತ
ಅವನು ಆಡಿಸಿದಂತೆ
ನಡೆಯುವುದು ನಮ್ಮ ಆಟ.

ಜೀವನದಲ್ಲಿ  ಒಮ್ಮೆ ಬರುವುದು ರಾಜನ ಪಾತ್ರ
ಒಮ್ಮೆ ಬರುವುದು ಬಿಕ್ಷುಕನ ಪಾತ್ರ
ಅವನ ತಾಳಕ್ಕೆ ತಕ್ಕ ಕುಣಿತಾ
ಪಾತ್ರಕ್ಕೆ ತಕ್ಕ ಅಭಿನಯ
ಸೂತ್ರಕ್ಕೆ ತಕ್ಕ ಆಟ.

ಅವನ ಇಚ್ಚೆಯಂತೆ ನಡೆಯುವುದು
ನಮ್ಮ ಜೀವನ
ಆಡಿಸುವಾತನ
ಕೈಚಳಕದ ಕೈ ಗೊಂಬೆ ನಾವು.

ಆಡಿಸಿದಂತೆ ಆಟವಾಡುತ್ತಾ
ಕಳೆಯುವುದು ನಮ್ಮ ಬದುಕು
ನಾನು ನನ್ನದು ಎಂಬಾ
ಮೋಹ ಮಾಯೆಯ ಆಟವು ಅವನದೇ.

ನಾನು ನನ್ನದು ಎಂಬುವ ಆಟ ಆಡಿಸಿ
ಜೀವನದ ಪಾಠ ಕಲಿಸಿ
ನಮ್ಮನ್ನು ಸರಿದಾರಿಗೆ
ತರುವುದು ಆ ಭಗವಂತನ ಕೆಲಸ.

ಜೀವನ ಎಂಬಾ ನಾಟಕರಂಗದಲ್ಲಿ
ನಟಿಸುವುದು ಮಾತ್ರ ನಮ್ಮ ಕೆಲಸ.

ರಾಘವೇಂದ್ರ  ಸಿಂತ್ರೆ
ರಾಜಕಮಲ್, ಶಿರಸಿ.