ನೊಂದ ಜೀವಕ್ಕೆ
ದೇವ ನಾಮ ಸ್ಮರಣೆ ಒಂದೇ_
ಕಾಯುವುದು ನಿಮ್ಮನ್ನು ಕೊನೆವರೆಗೂ ಬಂದು;
ಆಸೆ ತುಂಬುವ ಅವರಿವರೆಲ್ಲಾ_
ಕೈ ಬಿಡಬಹುದು, ಎಚ್ಚರ! ನಡು ನೀರಿನಲ್ಲಿ ತಂದು:
ತಲೆಯೊಳಗೆ ತುಂಬಿಕೊಂಡು_
ನೀರೆಯುವುದೇಕೆ ಚಿಗುರಲಾರದಾ ಭಾವನೆಗಳನ್ನು ?
ಕಾಲ ಶಪಿಸಿ ಫಲವಿಲ್ಲ! ಎಲ್ಲಾ_
ಅನುಭವಿಸಿ ಅರಗಿಸಿಕೊಳ್ಳಬೇಕು ಎದುರಾಗುವುದನ್ನು

✍️ನಾಗರಾಜ ಗುನಗ
ನಿವೃತ್ತ ಸೈನಿಕರು
ಕೋಡಕಣಿ/ಕುಮಟಾ ತಾಲ್ಲೂಕು