ಹಾಚಿ: ಆಧುನಿಕ ವಚನಗಳು
*******************

396)
ವೇಶ್ಯಯಿಗೆ ಮಡಿಮೈಲಿಗೆಯಿಲ್ಲ ಅಧರ್ಮದ
ವ್ಯಕ್ತಿಗೆ ನಾಚಿಕೆಯಿಲ್ಲ ಕಳ್ಳರಿಗೆ ಮರ್ಯ್ಯಾದೆಯ
ಹಂಗಿಲ್ಲ ಸಮಾಜಕೊಳ್ಳೆ ಹೊಡೆಯುವ
ವ್ಯಕ್ತಿಯ ನಡೆ ನುಡಿಯೊಳಗೆ ಧರ್ಮದ
ಭಯವಿರಲೆಂದರು ಗುರುವಿಶ್ವರಾಧ್ಯರು !!

397)
ದರ್ಬಾರಿನ ಕಾರ್ಬಾರಿನ ಗುಂಪು ಜಾಣರ ಜಾಣರದು
ಸುಶಿಕ್ಷಿತ ಗುಣಪರಿಸಂಗವು ದಡ್ಡರದು
ಅಕ್ಷರಸ್ಥರಿಗಿಂತ ಅನಕ್ಷರಸ್ಥರ ದರ್ಬಾರೇ ಮೇಲು
ಮತದಾರರು, ಅಧಿಕಾರಿಗಳು,ಅಂಗಾಂಗ ಕಳೆದುಕೊಂಡವರಾಗಿ,
ಮೂಕ,ಕಿವುಡು,ಅಂಧಕರಾಗಿ ಅವರೆದುರಿಗೆ ಸಾಕು ಪ್ರಾಣಿಗಳಂತೆ
ತಲೆಯಾಡಿಸುವ ಜೀವಿಗಳಾಗಿಹರೆಂದರು
ಗುರುವಿಶ್ವರಾಧ್ಯರು. !!

398)
ನಿಮ್ಮ ದಾರಿಯಲ್ಲಿ ನಡೆಯನೆಂದರೆ
ಹೆಜ್ಜೆಗಳಿಗರುವಿಲ್ಲ, ಗುರುಮರ್ಮವು
ಎನಗೆ ತಿಳಿದಿಲ್ಲ, ನಿಮ್ಮ ನಡೆನುಡಿಯೊಳಗೆ
ಸಾಗಿದಾಗ ಈ ಕಾಯವು ಸಂಸ್ಕರಣ
ವಾಗುವುದೆಂದರು. ಗುರುವಿಶ್ವರಾಧ್ಯರು. !!

399)
ಆಧ್ಯಾತ್ಮವು ಅನುಭಾವದ ಸಂಕೇತ
ಇದರೊಳಗೆ ಬರುವ ಜ್ಞಾನಾಮೃತವು ಅನುಭವದ ದ್ಯೋತಕ
ನಾನು ಎಂಬುದ ಅಳಿಸಿ ಸ್ಥಿತಪ್ರಜ್ಞೆ ಮೂಡಿಸುವ
ಚೈತನ್ಯವೇ ಆಧ್ಯಾತ್ಮಿಕವೆಂದರು- ಗು.ವಿ. !!

400)

ತನುವಿನ ಭಕ್ತಿ ಗುರುವಿಂಗೆ
ಮನದೊಳಗಿನ ಲಿಂಗ ಗುರುವಿಂಗೆ
ಕೈಯೊಳಗಿನ ಧನವು ಗುರುವಿಂಗೆ
ಈ ಶರೀರದ ಕಾಯಕೇಂದ್ರಿಯಗಳು ಗುರುವಿಂಗೆ
ಗುರುವಿಶ್ವರಾಧ್ಯರು. !!

401)
ಸಂತಸಕ್ಕೆಳೆಯುವರೊಂದು ತೇರನು
ದುಃಖಕ್ಕೆಳೆಯುವರೊಂದು ತೇರನು
ಎಳೆಯುವ ತೇರು ಒಂದೇ ಆದರೂ
ದೈವದ ತೇರಿಗಿಂತ ಪ್ರಾಪಂಚಿಕ ತೇರಿನ
ಗುಣ ನಿಗೂಢವೆಂದರು ಗುರುವಿಶ್ವರು. !!

– ಹಾಚಿ ಇಟ್ಟಿಗಿ, ಸಾಹಿತ್ಯಿಕ ಮಾಂತ್ರಿಕ
ಆಧುನಿಕ ವಚನಕಾರ, ಹೂವಿನಹಡಗಲಿ
ವಿಜಯನಗರ ಜಿ. 9844312559