ಅನುಪಮಾ

ಪುರುಷ ಪ್ರಪಂಚದಲಿನ ನರಳುತಿಹ
ನಗುಮೊಗವು ನಾಲ್ಕು ಗೋಡೆಗಳ
ನಡುವಿನ ಹೂವು
ಯಾರೆಂದು ಬಲ್ಲಿರಾ ನೀವು..?
ವಿಜ್ಞಾನ ವೈಚಾರಿಕತೆಯೆದುರಿನ ಬಾಲೆ
ಇಂದಿಗೂ ಅವಳಿಗಿರುವ ಹೆಸರೆ ಅಬಲೆ
ಪುರುಷ ಪ್ರಧಾನ ಪ್ರಪಂಚದ ಸರಹದ್ದಿನಲಿ….
ಉಸಿರಾಡುವ ಮಹಿಳೆ ಉಪೇಕ್ಷೇಗೆ
ಗುರಿಯಾಗುವ ದುರಂತದಲಿ
ಕೇಳುತಿಹ ವರದಕ್ಷಿಣೆಯ ರಣಕಹಳೆ
ಅಡಿಗೆ ಮನೆಯಲ್ಲಿ….
ಅಡಗಿಹ ಬೆಡಗಿ
ಬೆಡಗಿ ಮುಗಿಸುವಳಿಲ್ಲಿ
ಬಾಳನ್ನು ಬೆಳಗಿ…
ಹಾಡು ಹೇಳುತ್ತ ಹೂತ್ತು
ಕಳೆವ ಹುಡುಗಿ…
ಕಳೆವಳು ಜೀವಮಾನವೆಲ್ಲ ನಡುಗಿ
ಹಿಂದಿತ್ತು ಈಗಿಲ್ಲ ವೈಚಾರಿಕತೆ….
ಜಗತ್ತನ್ನೆ ತೂಗುತಿಹಳು ಈ ಮಾತೆ
ಬಾನಂಗಳಕೆ ಭಾರತದ ತೇರು
ಎಳೆದವಳು ಕಲ್ಪನಾ ಚಾವ್ಲ
ಮೌಂಟ ಎವರೆಸ್ಟ್ ಏರಿದವಳು…
ಬಚೇಂದ್ರಿಪಾಲ್
ವಿಶ್ವದ ಎತ್ತರದ ಯುದ್ಧಭೂಮಿಗೆ
ನಡೆದವಳು ಶಿವಚೌವಾನ್
ನೌಕಾಪಡೆಯತ್ತ ನಡೆದವಳು
ಶುಭಾಂಗಿ ಸ್ವರೂಪದ…
ಅವಳು ಅವಳೆ ಅನುಪಮಾ….!

ರಚನೆ: ರೂಪಾ