ಸುಂದರ ಚಿಟ್ಟೆ
**********
ಬಣ್ಣದ ಚಿಟ್ಟೆ ಸುಂದರ ಚಿಟ್ಟೆ
ಗಿಡದಲಿ ಏತಕೆ ಕುಳಿತಿರುವೆ
ಏನನು ಯೋಚನೆ ಮಾಡುತಲಿರುವೆ
ನನ್ನಯ ಬಳಿಯಲಿ ನೀ ಹೇಳು ll
ಹೂಗಳ ಮೇಲೆಯೆ ಕುಳಿತಿಹೆಯಲ್ಲ
ಬಂಧುಗಳೆಲ್ಲ ಎಲ್ಲಿಹರು
ಗಿಡದಿಂದ ಗಿಡಕ್ಕೆ ಹಾರುವ ಚಿಟ್ಟೆಯೆ
ಏನನು ಅರಸುವೆ ನೀ ಹೇಳು ll