ರುಬಾಯಿಗಳು
°°°°°°°°°°°°

ದಿಗಂತ

ನನ ಬಾಳ ದಿಗಂತದಿ
ನೀ ಬಂದೆ ತಾರೆಯoದದಿ
ನನ ಬಾಳು ಬೆಳಗುತ
ಬಾಳ ಬೆಳದಿಂಗಳಾದಿ

ಪರಿಶ್ರಮ

ಪರಿಶ್ರಮಕೆ ತಕ್ಕ ಫಲವುಂಟು
ಕಷ್ಟಕೆ ತಕ್ಕುದಾದ ಬೆಲೆಯುoಟು
ಎಂದಿಗೂ ಮರೆಯದೆ ಬಾಳಿನಲಿ
ಅಳವಡಿಸಿಕೊ ನೀ ಸುಖವುಂಟು

ಪ್ರತಿಫಲ

ಫಲಾ ಫಲ ಚಿಂತಿಸದಿರು
ಪ್ರತಿಫಲ ಬಯಸದಿರು
ನಿನ್ನಯ ಕರ್ಮವ ನೀ ಮಾಡು
ಗೀತಾ ಸಾರ ಮರೆಯದಿರು

ಗೌರವ

ತೋರು ಗುರು ಹಿರಿಯರಿಗೆ ಗೌರವ
ಸದಾ ಇದನರಿತಿರು ನೀ ಮಾನವ
ಅರಿತು ಅದರಂತೆ ನಡೆಯುತಿರೆ
ಹೆಚ್ಚಿಸುವುದದು ನಿನ್ನಯ ‘ಮಾನ’ ವ

~ಸಂಪಿಗೆ ವಾಸು, ಬಳ್ಳಾರಿ