ತೂಗುವ ತೊಟ್ಟಿಲು
*************
ಚಂದಿರ ವದನನೆ ಸುಂದರ ರೂಪನೆ
ಚಂದದಿ ಕುಳಿತಿಹ ಹರನಲ್ಲಿ
ದೇವನ ವೈಭವ ಕಂಡೆನು ಭಕ್ತಿಲಿ
ತೂಗುವ ತೊಟ್ಟಿಲು ಸೊಬಗಲ್ಲಿ ll

ಗಂಗೆಯು ಶಿರದಲಿ ಧರಿಸಿಹ ದೇವನೆ
ಭಕ್ತಿಯ ನಾಮವ ಪಾಡುವೆನು
ಕೈಯಲಿ ತ್ರಿಶೂಲ ಪಿಡಿದಿಹ ಶಂಕರ
ಕರುಣಿಸು ಮಂಗಳ ಬೇಡುವೆನು ll

ಹಣೆಯಲಿ ಭಸ್ಮವು ಕೊರಳಲಿ ಮಾಲೆಯು
ಧರಿಸಿಹ ಶಿವನೇ ಶಂಕರನೆ
ಮೂರನೆ ಕಣ್ಣನು ತೆರೆದರೆ ಲೋಕವು
ಉಳಿಯದು ನಿನ್ನಯ ಲೀಲಿಯೇ ll

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ