ಹೇ ಶಿವಶಂಕರ
**********
ಬದುಕಿನ ಬವಣೆಯ ಕಳೆಯಲು ಬಂದಿಹ
ಭಕ್ತವತ್ಸಲ ಹೇ ಶಿವಶಂಕರನೆ
ಗಿರಿಜೆಗೆ ತಪಸಿಗೆ ಒಲಿದಿಹ ದೇವನೆ
ಕರುಣದಿ ಎನ್ನನು ನೀ ಪೊರೆಯೋ ll

ಮನದಲಿ ಎಲ್ಲರು ನಿನ್ನನು ನುತಿಸುತ
ಭಕ್ತಿಯ ಪಥದಲಿ ನಡೆದಿಹರು
ಋಷಿಮುನಿ ಇಂದ್ರಚಂದ್ರರೂ ಪೂಜಿಸಿ
ದೇವನ ಕೃಪೆಯನು ಪಡೆದಿಹರು ll

ಈಶನ ಆಣತಿಯಂತೆಯೆ ನಡೆವುದು
ಲೋಕದಿ ಎಲ್ಲಾ ಕಾರ್ಯಗಳು
ಅವನನು ನೆನೆದರೆ ಲಭಿಪುದು ನೆಮ್ಮದಿ
ಮನಸಿಗೆ ದೊರೆವುದು ಶಾಂತಿಯು ll

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ