ಹೇ ಪರಮೇಶ್ವರ
***********
ಹೇ ಪರಮೇಶನೆ ನೀ ಗೌರೀಶನೆ
ಈ ಕಂದನಲ್ಲಿ ಒಲವ ತೋರೆಯಾ
ಈ ಬಾಳಿನಲ್ಲಿ ಬೆಳಕ ನೀಡೆಯಾ ll

ಹಿಮಗಿರಿ ಒಡೆಯಾ ಕರುಣಾನಿಧಿಯೆ
ನೀಡೆಯ ಬಾಳಲಿ ಅಭಯವಾ
ವರವಾಗುವೆ ನೀ ಕರಮುಗಿಯುವೆ ನಾ ll

ದಯಕರ ಶಿವನೇ ಪಾರ್ವತಿ ಪ್ರಿಯನೇ
ಕರುಣದಿ ಎನ್ನನು ನೀ ಸಲಹೋ
ನಂದೀಶನೇ ಉಮಾಮಹೇಶ್ವರನೇ ll

ಕಾರುಣ್ಯ ನಿಧಿಯೇ ಕರುಣಾ ಸಾಗರ
ಉಮಾ ಕಾಂತನೆ ನೀ ಬಾರೋ
ಬದುಕಲಿ ನೆಮ್ಮದಿ ನೀ ತೋರೋ ll

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ