ಸಮಯ ಸಾಧಕನ ಸೊತ್ತು

ಸಮಯಕ್ಕೆ ತಾಳ್ಮೆ
ಅಡವಿಟ್ಟು ಓದು
ನಾಳೆ ಸಾಧನೆಯು
ತಾಳ್ಮೆಯ ಶ್ರಮಕ್ಕೆ ಸೋತು
ಗೆಲುವಿನ ಸಮಯ ನಿನ್ನದಾಗಿಸುವುದು….!

ಬದುಕು ಪಗಡೆಯ ಆಟ
ನಿನ್ನನ್ನೇ ಪಣಕ್ಕಿಡು
ಚಲ್ಲಾಟವಾಡದೆ
ಜಾಗೃತೆಯಿಂದ ಮೌನವ ದಾಳವಾಗಿಸು…!

ಮಾತಿಗೆ ಇರದಷ್ಟು ಉತ್ತರಗಳು
ಮೌನದಲ್ಲಿರುವುದು..!

ಸದ್ದಿಲ್ಲದ ಯಶಸ್ಸಿಗೆ
ಚುಚ್ಚು ಮಾತಾಡುವವರು
ಬಾಯಿ ಮುಚ್ಚುವರು..!

ಸಮಯ ಸಾಧಿಸಿ ಸಾಧನೆ
ಮಾಡಿದವರು
ತಾಳ್ಮೆ ಗೆದ್ದವರು…

-ಕಾಮನಬಿಲ್ಲು ಸಾಹಿತಿ ಮೌನೇಶ್. ಜೆಕೆ. ಕಲಬುರ್ಗಿ ✍️