ಭಕ್ತಿಗೀತೆ :
ದತ್ತವಿಷಯ : ಅನಂತಪದ್ಮನಾಭ
ಶೀರ್ಷಿಕೆ : ಶೇಷಶಯನ
*****************
ಶೇಷಶಯನ ಪದ್ಮನಾಭ
ವಾಸುದೇವ ಶ್ರೀಹರಿ
ಅನಂತಶಯನ ಲಕ್ಷ್ಮಿಲೋಲ
ಗರುಡವಾಹನ ಸುಂದರ ll

ದೇವ ನೀನು ಪಾಲಿಸೆನ್ನಾ
ಮುರಳಿ ಲೋಲ ಶ್ರೀಧರ
ಕಾವ ದೇವನೆ ನೀನು ಎನ್ನನು
ನಿನಗೆ ನಮನ ಗಿರಿಧರ ll

ಹಲವು ನಾಮ ಹಲವು ರೂಪ
ದೇವನೊಬ್ಬನೆ ಜಗದೊಳು
ಹತ್ತಾವತಾರ ಎತ್ತಿ ಬಂದೆ
ವಿಷ್ಣು ನೀನೇ ಶ್ರೀನಿವಾಸ ll

ಅನಂತಪುರದಿಂದ ಬಂದೆ
ತಿರುವನಂತಪುರದಿ ನೆಲೆಸಿದೆ
ಭಕ್ತಜನರ ಭಕ್ತಿಗೊಲಿದೆ
ಅನಂತಪದ್ಮನಾಭನೇ ll

✍️ ಬಿ ಉದನೇಶ್ವರ ಪ್ರಸಾದ್ ಮೂಲಡ್ಕ