Table of Contents

ಶುದ್ಧ ಹಣದ ಪರಿಕಲ್ಪನೆ

ಹಣ ಗಳಿಕೆಯ ಶುದ್ಧ ರೂಪದ ಪರಿಕಲ್ಪನೆ, ‘ದುಡ್ಡೆ ದೊಡ್ಡಪ್ಪ ಅಂದಾನ ನಮ್ಮಪ್ಪ” ಎನ್ನುವ ಹಾಗೇ ಹಣ ವಿದ್ದರೆ ಎಲ್ಲವೂ ಸಿದ್ದ- ‘ಕಾಂಚಣಂ ಕಾರ್ಯ ಸಿದ್ಧಿ’ ಹಣ ಯಾರಿಗೆ ತಾನೇ ಬೇಡ ಹೇಳಿ?

ಹಣವೆಂದರೆ ಹೆಣವೂ ಬಾಯಿ ಬಿಡುತ್ತದೆ. ಅದು ಏನೇ ಇರಲಿ ಹಣ ಗಳಿಕೆಯ ಶುದ್ಧತೆಯ ಬಗ್ಗೆ ವಿಶ್ಲೇಷಿಸುವುದೇ ಆಗಿದ್ದರೆ ಹಣ ಗಳಿಕೆಗೆ ಸಾವಿರಾರು ದಾರಿ ಉಂಟು ಆದರೆ ಹಣ ಗಳಿಕೆಯ ಮಾರ್ಗ ಮಾತ್ರ ಶುದ್ಧವಾಗಿರಬೇಕು. ಸಮಾಜದಲ್ಲಿ ಮಾನವ ಹಣ ಗಳಿಕೆಗಾಗಿ ಏನೆಲ್ಲಾ ಕಸರತ್ತು ಮಾಡುತ್ತಾನೆ ಎಂಬುವುದು ತಿಳಿದಿದೆ. ಸಮಾಜದಲ್ಲಿ ವಂಚನೆ, ದರೊಡೆ, ಮೋಸ, ಕೋಲೆ, ಸುಲಿಗೆ ಇನ್ನಿತರ ಕರ್ಮಗಳು ಗೈದು ಹಣಗಳಿಸುವವರು ಸರ್ವೆ ಸಾಮನ್ಯವಾಗಿ ಕಾಣಬಹುದು. ಈ ರೀತಿಯ ಸಂಪಾದನೆ ಕೂಡ ಸಂಪಾದನೆ ಅಲ್ಲವೆ?

ಹೌದು! ಸಂಪಾದನೆ, ಆದರೆ ಇದು ಆತ್ಮ ವೀರೊದಿ ಸಂಪಾದನೆ ಎಂಬುವುದು ತಿಳಿಯದಿರು ಮನುಜನೇ, ನಿನ್ನ ಒಳಗಿನ ತಿಳಿಯನು ಕಲುಕದಾದೇಯಾ? ಓ ಹಾಗಾದರೆ ಇಲ್ಲಿ ಯಾರು ಶುದ್ಧ ಹಣ ಹೊಂದಿದ್ದಾರೆ? ರೈತರೋ, ರಾಜಕಾರಣಿಗಳೋ, ವೈದ್ಯರೋ, ವ್ಯವಹಾರ ದ್ಯಾನವುಳ್ಳ ಚತುರರೋ, ಯುಕ್ತಿವುಳ್ಳವರೋ, ಬಲಶಕ್ತಿವುಳ್ಳವರೋ, ಜನಶಕ್ತಿವುಳ್ಳವರೋ ಯಾರು ? ಈ ಶುದ್ಧ ರೂಪದ ಹಣದ ಮೂಲಕ್ಕೆ ಸಂಭಂದಿಸಿದವರು ಎಂದು ಪರಿಗಣಿಸುವುದು ತುಂಬಾ ಕಠಿಣ ಅಲ್ಲವೇ? ಆದರೆ ಕಡಿಮೆ ಜನರು ತಿಳಿದ ಒಂದು ಮಾರ್ಗವಿದೆ, ಅದು

ಏನೆಂದರೇ ‘ಓ ಮನುಜ ರಾತ್ರಿ ನೀ ಮಲಗುವ ಮುನ್ನ ನಿನ್ನ ಎದೆ ಮೇಲೆ ಕೈಯಿಟ್ಟು ಪ್ರಶ್ನಿಸು ನಿನ್ನ ಆತ್ಮಕ್ಕೆ ಯಾರು ನೀಡದ, ಯಾರು ತಿಳಿಯದ, ನೀಗುಡವಾದ ಸತ್ಯ ನೀ ತಿಳಿಂಯುವೇ. ಅಂದರೆ ನಿನ್ನ ಆತ್ಮ ನಿನ್ನನ್ನು ಉತ್ತರಿಸುತ್ತದೆ. ವಿಪರ್ಯಾಸದ ಸಂಗತಿ ಎಂದರೆ ಸಚಿವ ವಸ್ತುಗಳು ನೀರ್ಜಿವ ವಸ್ತುಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಆದರೆ ನಿರ್ಜಿವ ವಸ್ತುವಾದ ಹಣ ಸಜೀವ ವಸ್ತುವನ್ನು ಆಟವಾಡಿಸುತ್ತದೇ ಅಲ್ಲವೇ. ಹುಟ್ಟುತ್ತಲೇ ದಾಯಾದಿಗಳನ್ನಾಗಿ ಮಾಡಿತು ಹಣ, ದೇಶ-ದೇಶಗಳ ಮದ್ಯ ಬೆಂಕಿ ಇಟ್ಟಿದ್ದು ಹಣ, ಮತ್ತು ‘ತನ್ನದೇ ನಿಜರೂಪ ಹೋಲುವ ಪ್ರಾಣಿಯನ್ನು ಮುಗಿಸುವ ಕೆಲಸ ಮಾಡಿಸಿದ್ದು ಹಣ ಅಲ್ಲವೇ, ಹಾಗದರೆ ಹಣವನ್ನು ದ್ವೇಷಿಸುವ ಈ ಲೇಖನದ ಮುಖ್ಯ ಉದ್ದೇಶವಲ್ಲ, ‘ಕೇವಲ ಹಣದ ಪರಿಕಲ್ಪನೆಯನ್ನು ಚಿತ್ರಿಸುವುದೇ ಆಗಿದೆ.

ಹೀಗೆ ಹಣ ಎಲ್ಲಾ ರಂಗದಲ್ಲಿ ದಾಪುಗಾಲು ಹಾಕಿದೆ. ಆದರೆ ನಂಬಿಕೆ, ಪ್ರೀತಿ, ಸ್ನೇಹ, ಕರುಣೆ ಮತ್ತು ಮನುಜನ ಭಾವನೆಗಳ ರಂಗಕ್ಕೆ ಇಣುಕದೇ ಇರುವುದು ಒಂದು ರೀತಿಯ ಸಾಮಾಧಾನದ ವಿಷಯವಾಗಿದೆ.

ಬರಹಗಾರರು: ಮೈಹಿಬೂಬ್ ಎ.ಸಿ