ಮದವೂರ ಗಣಪತಿ
*************
ಮಧುಪುರ ದೊಡೆಯ ಗಣನಾಥ
ಮದರಿಗೆ ಒಲಿದ ಗಿರಿಜೆ ಸುತ
ಮುದದಲಿ ಭಜಿಸುವೆ ಗಜವದನ
ಚದುರಿಸು ದುರಿತವ ಗಜಾನನ ll

ಕೇಳುವೆ ವರವನು ಗಣಪತಿಯೆ
ಹೇಳುವೆ ಭಜನೆಯ ನೀನೊಲಿಯೆ
ಬೀಳೆನು ಈ ಭವ ಬಂಧನದಿ
ಬಾಳಿಸು ಚಂದದಿ ಈ ಜಗದಿ ll

ಪಾಡುವೆ ನಿನ್ನಯ ನಾಮ ಸಂಕೀರ್ತನೆ
ಬೇಡುವೆ ಗಣಪನೆ ಸಾನಿಧ್ಯ
ಕಾಡಿದೆ ನಿನ್ನನು ಕಾಣುವ ತವಕವು
ಮಾಡಿದೆ ಗಣಪತಿ ಪೂಜೆ ಹವನವು ll

ಲಾಲಿಸು ಶಿವಸುತ ಗಣಗಳ ಒಡೆಯನೇ
ಪಾಲಿಸು ಎಮ್ಮನು ಕರುಣದಿ ಪೊರೆಯೋ
ಆಲಿಸು ಎನ್ನಯ ಮೊರೆಯನು ಪ್ರೇಮದಿ
ತೇಲಿಸು ಭಕ್ತಿಯ ಸಾಗರದಿ ll

✍️. ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ