ದೇವರ ಮಾಯೇ
***********
ಕಣ್ಣಿಗೆ ಕಾಣದ ಶಕ್ತಿಯು ಒಂದಿದೆ
ನಮ್ಮನು ಕಾಯುತಿದೆ
ಕಣ್ಣನು ಮುಚ್ಚಲು ಮನದಲಿ ಮೂಡಲು
ಅಭಯದ ರೂಪವಿದೆ ll

ಶಕ್ತಿಯ ನೀಡುವ ಜ್ಞಾನವ ಕರುಣಿಸಿ
ಕರವನು ಹಿಡಿಯುತಲಿ
ಭಕ್ತಿಯು ಒಂದೂ ಇದ್ದರೆ ಸಾಕದು
ಭಯವದು ಬರದಿಲ್ಲಿ ll

ಕರುಣೆಯ ತೋರಲು ಅಭಯವ ನೀಡಲು
ಬೇಕಿದೆ ನಮಗಿಲ್ಲಿ
ವರವಿದು ಸಿಗುವುದು ಬೇಡಲು ಮನಸಲಿ
ಕರವನು ಮುಗಿಯುತಲಿ ll

ಕೃಷ್ಣನು ಇರುವನು ರಾಮನು ಬರುವನು
ಭಕ್ತರ ಪಾಲಿಸಲು
ಶಂಕರ ಪರಶಿವ ಕರುಣೆಯ ವರದನ
ನಿತ್ಯವು ಪೂಜಿಸಲು ll

✍️. ಬಿ ಉದನೇಶ್ವರ ಪ್ರಸಾದ್ ಮೂಲಡ್ಕ