ಜೀವನದ ಆರಕ್ಷಕ

ನಾವೆಗೆ ಹುಟ್ಟು ಹೇಗೆ ಮುಖ್ಯವೋ
ಬಾಳ ನಾವೆಗೆ ಜೊತೆಗಾರನು ಅಷ್ಟೇ ಮುಖ್ಯವೋ
ಜೀವನದ ಸಪ್ತಪದಿಯ ಸಾಕ್ಷಾತ್ಕಾರವೂ
ಸುಖ ಸಂಸಾರಕ್ಕೆ ಆಧಾರ ಸ್ತಂಭವೂ

ಓ ಜೊತೆಗಾರನೇ ನೀನಾಗಿರುವೆ ನನ್ನ ಉಸಿರು
ನಿನ್ನಿಂದಲೇ ನನ್ನ ಬಾಳಿಗೆ ಬಸಿರು
ಅದುವೇ ನನ್ನ ಜೀವನದ ಹಸಿರು
ಅದರಿಂದಲೇ ನಮ್ಮಿಬ್ಬರ ಸಾರ್ಥಕ ಸಂಸಾರವು

ಓ ಜೊತೆಗಾರನೇ ಮುದ್ದು ಮಾತಿನ ಮಾತುಗಾರನಾಗಿ
ಪ್ರೀತಿ ತೋರುವ ಒಡೆಯನಾಗಿ
ತಪ್ಪತ್ತಿದ್ದಿ ಬುದ್ಧಿ ಹೇಳುವ ಶಿಕ್ಷಕನಾಗಿ
ಅನುದಿನವೂ ನನ್ನ ಜೊತೆಗಿರು ಆರಕ್ಷಕನಾಗಿ

ನಲ್ಮೆಯ ನಲ್ಲನಿರಲು ಬಾಳು ಸುಂದರ
ಏಳುಬೀಳಿನ ಬಾಳಲ್ಲಿ ಹೋಗೋಣ ಪರಸ್ಪರ
ನೀ ನನ್ನ ಜೊತೆಗಿರಲು ಸಂಸಾರ ಸುಮಧುರ
ನಲ್ಲ ನೀ ಇಲ್ಲದೆ ನನ್ನ ಬಾಳು ನಶ್ವರ……

ರವೀಂದ್ರ ಸಿ.ವಿ.
ವಕೀಲರು, ಮೈಸೂರು