ಗುರುಗಳಿಗೆ ನಮನಗಳು
****************
ಗಾನಗಂಧರ್ವ ಪದ್ಯಾಣ ಗಣಪಣ್ಣನೆ
ಯಕ್ಷಗಾನದಿ ಮೇರು ಪರ್ವತವನ್ನೇರಿ
ಹಾಡಲು ಕುಳಿತರೆ ಗಾನ ಮಂದಾರ
ಒಲವಿನಿಂದ ಮಾತಾಡುವ ಸುರ ಸುಂದರ
ಸಭೆ ಸಮಾರಂಭದಲ್ಲಿ ಮುಂದಾಗಿ
ಬಯಲಾಟದಲ್ಲಿ ಮೇರು ಶಿಖರದಿ
ಜನ ಮನ ಮೆಚ್ಚುವಂತಹ ಅಪ್ರತಿಮ
ಗಾನಗಂಧರ್ವ ಪದ್ಯಾಣ ಗಣಪತಿ ಭಟ್ಟರ ಪಾದಕೆ
ನಮ್ಮಯ ನಮನವು ll

ಭಾಗವತಿಕೆಯ ಕಂಡು ಮೋಹಗೊಂಡೆ
ಯಕ್ಷಲೋಕ ಕಂಡ ಮಹಾ ಪ್ರತಿಭೆಗೆ ಮರುಳಾದೆ
ಗಾನವೈಭವಕ್ಕೆ ಅವರ ಕೊಡುಗೆ ಅಪಾರವೇ
ಯಕ್ಷಗಾನದಲ್ಲಿ ಮಿಂಚಿದ ಮಹಾನು ಭಾವರೇ
ಯಕ್ಷಗಾನದ ಅಗ್ರಗಣ್ಯ ಸ್ಥಾನವ ಹೊಂದಿರುವ
ಯಕ್ಷಗುರು ಎಂದೆನಿಸಿ ಹಲವಾರು ಶಿಷ್ಯವೃಂದವು
ನಿಮಗಿದೋ ಶಿಷ್ಯವೃಂದದ ವಂದನೆಯು
ನಮ್ಮಯ ನಮನವೂ…..ll

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ