ಕಲಿಯುಗದ ಕವನಗಳು

1】ಹುಟ್ಟು-ಗುಟ್ಟು

ಗುಟ್ಟು ಮಾಡಿದ ಕರಾಮತ್ತು
ತನ್ನ ಗುಟ್ಟಿನ ವಿಷಯ ಮುಚ್ಚಿಟ್ಟು
ಪರರ ಗುಟ್ಟಿನ ವಿಷಯವನ್ನೆ
ಜಗ ಜಾಹೀರು ಮಾಡಿ

ಗುಟ್ಟನ್ನೇ ರಟ್ಟು ಮಾಡುವ
ಕಾಯಕವನ್ನು ಮಾಡುವ
ಮನುಷ್ಯನ ಗುಣಕ್ಕೆ
ಮನುಷ್ಯನ ಹುಟ್ಟು ಮರಣವನ್ನು ಗುಟ್ಟಾಗಿಟ್ಟ
ಆ ಪರಮಾತ್ಮ…..

2】ಜಾತಕ
ಕಥೆ: ಕೂಡಿ ಕಳೆಯುವ ಆಟ

ದೊಡ್ಡ ದೊಡ್ಡ ಜೋತಿಷ್ಯ ಹೇಳುವವರು ದೊಡ್ಡ ಅರ್ಚಕರು
ಎಲ್ಲರೂ ಸೇರಿ ಗಂಡು ಹೆಣ್ಣು ಜಾತಕ ಕೂಡಿಸಿ
ಎಷ್ಟೋ ಜಾತಕದ ಗುಣಗಳನ್ನು ಕೂಡಿಸಿ
ಅದ್ಭುತ ಇಂತಹ ಗುಣಗಳು ಕೂಡಿದ
ಜಾತಕ ನಾವು ಜೀವಮಾನದಲ್ಲಿ ಎಂದು ನೋಡಲಿಲ್ಲ
ಅಂತಾ ಚೆನ್ನಾಗಿದೇ ಜಾತಕ ಅಂತ ಹೇಳಿ…

ಒಂದು ಮದುವೆ ಮಾಡಿಸಿದರು.
ಆದರೆ ಜೀವನದಲ್ಲಿ ಆ ಗಂಡು ಹೆಣ್ಣು
ಎಂದಿಗೂ ಜೀವನ ಎಂಬಾ ಹಳಿಯಲ್ಲಿ
ಹೊಂದಾಣಿಕೆಯ ಸಂಸಾರದಲ್ಲಿ ಎಂದು
ಕೂಡಲೇ ಇಲ್ಲ….

3】ಕಾಡ್ಗಿಚ್ಚು ಹೊಟ್ಟೆಕಿಚ್ಚು

ಕಾಡ್ಗಿಚ್ಚಿನ ಬೆಂಕಿಯನ್ನು ಆರಿಸಬಹುದು.
ಕಾಡ್ಗಿಚ್ಚಿನ ಬೆಂಕಿಯನ್ನು ಆರಿಸಬಹುದು.

ಆದರೆ ಮನುಷ್ಯನ ಹೊಟ್ಟೆ ಕಿಚ್ಚನ್ನು ಆರಿಸಲಾಗದು………

– ರಾಘವೇಂದ್ರ ಸಿಂತ್ರೆ
ರಾಜ್ ಕಮಲ್, ಶಿರಸಿ