ಪಂಚದಳ ಮುಕ್ತಕ
************

ನೀಳ ಕೇಶದ ಅರಸಿ ಬಾಚಿ ಹೆಣೆದಿಹ ಸೊಗಸು
ಕೇಳಿ ಪಡೆದಿಹೆಯೇನು ರೂಪವನು ದೇವನಲಿ
ಬೀಳದಿರು ಬಲೆಯೊಳಗೆ ಕಾದಿರುವ ಜನರಿಹರು
ಬಾಳಿನಲಿ ಕರಿಚುಕ್ಕಿ ತಾರದಿರು ಓ ರಮಣಿ
ತಾಳುವುದು ಒಳಿತೆನುವೆ – ಲಕ್ಷ್ಮೀಸುತ

✍️ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ

ಮುಕ್ತಕ
*****

ಇರುವಾಗ ಆರೋಗ್ಯ ಮನುಜರಿಗೆ ಸಂತೋಷ
ದೊರೆತಾಗ ದುಃಖದಾ ಭಯವಿರದು ತಿಳಿಯೊ …
ಬರಲೇನು ತಂದಿರುವೆ ಹೊರುವೆಯೇ ಹೋಗುತಿರೆ
ಬರುವರೇ ಜೊತೆನಿನ್ನ- ಲಕ್ಷ್ಮೀ ಸುತ.

✍️ ಉದನೇಶ್ವರ ಪ್ರಸಾದ್. ಮೂಲಡ್ಕ