ಕವಿ, ಸಾಹಿತಿ, ಪ್ರಸಂಗ ಕರ್ತ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ
-
-
ಇತ್ತೀಚೆಗೆ ‘ಗಾನ ತರಂಗ’ ಹೆಸರಿನ ಅಂತರ್ಜಾಲದಲ್ಲಿ (ಯೂಟ್ಯೂಬ್) ಅನೇಕ ಹಾಡುಗಳ ಪ್ರಸಾರ ಮಾಡುವವರಲ್ಲಿ ಬಿ. ಉದನೇಶ್ವರ ಪ್ರಸಾದ್ ಎದ್ದು ಕಾಣುತ್ತಾರೆ.
-
ಇವರ ಮೂಲ ಮನೆ (ತರವಾಡು) ಬೊಳುಂಬು ಹಾಗೂ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಬಳಿಯ ಮೂಲಡ್ಕ.
-
ಲಕ್ಷ್ಮೀ ಅಮ್ಮ ಹಾಗೂ ಲಕ್ಷ್ಮೀ ನಾರಾಯಣ ಭಟ್ಟರ ಮಗನಾಗಿ 08.02.1980 ರಲ್ಲಿ ಇವರ ಜನನ.
-
ಶಾಲಾ ಶಿಕ್ಷಣ ಎಸ್.ಎಸ್. ಎಲ್.ಸಿ. ಆದರೂ ಅನೇಕ ವಿಷಯಗಳ ಸ್ವಯಂ ಕಲಿತವರು. ಸಣ್ಣ ಪ್ರಾಯದಲ್ಲಿ ಯಕ್ಷಗಾನ ಬಯಲಾಟ ನೋಡುವುದರಲ್ಲಿ ತುಂಬಾ ಆಸಕ್ತಿ. ಬದುಕಿನ ಪಾಠಶಾಲೆಯಲ್ಲಿ ಸಾಹಿತ್ಯ ರಚನೆ, ಪ್ರಸಂಗ ರಚನೆ, ಚುಟುಕು, ಕತೆ, ರುಬಾಯಿ, ಭಕ್ತಿ ಗೀತೆಗಳ ಬರೆಯಲು ಕಲಿತುದು ವಿಶೇಷವಾದದ್ದು. ಕನ್ನಡ ಹಾಗೂ ಮಲೆಯಾಳ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ.
-
ಭಕ್ತಿ ಗೀತೆ, ರುಬಾಯಿ, ಚುಟುಕ, ಮುಕ್ತಕ , ಯಕ್ಷಗಾನ ಪದ್ಯ, ಚಿತ್ರ ಕವನ, ಮಕ್ಕಳ ಕವನ ಇತ್ಯಾದಿ 3,000 ಕ್ಕಿಂತ ಹೆಚ್ಚು ಪ್ರಕಾರಗಳಲ್ಲಿ ಬರೆದಿದ್ದಾರೆ. ಅವರು ಬರೆದ ಹಾಡುಗಳಲ್ಲಿ ಕೆಲವನ್ನು ‘ಗಾನ ತರಂಗ’ ವಾಹಿನಿಯಲ್ಲಿ ಪ್ರಕಟಿಸಿದ್ದಾರೆ. ಯೂಟ್ಯೂಬಿನಲ್ಲಿ 400 ವೀಡಿಯೋಗಳನ್ನು ಪ್ರಕಟಿಸಿದ್ದಾರೆ. ಇವರ ಅಂಕಿತನಾಮ ‘ಲಕ್ಷ್ಮೀ ಸುತ’ .
-
ಪಡೆದ ಸನ್ಮಾನ ಪ್ರಶಸ್ತಿಗಳು :—-
-
೧) 2021 ರಲ್ಲಿ ಮಾಣಿಲದ ಸ್ವಾಮಿಗಳಿಂದ ಸನ್ಮಾನಿತರಾಗಿದ್ದಾರೆ.
೨) ಬದಿಯಡ್ಕದ ಬಾರಡ್ಕಲ್ಲಿ ಪಂಚಾಯತ್ ಅಧ್ಯಕ್ಷರಾದ ಶಾಂತ. ಬಿ ಹಾಗೂ ಬದಿಯಡ್ಕ ಯಸ್ ಐ ವಿನೋದ್ ಕುಮಾರ್ ಅವರ ಹಸ್ತಗಳಿಂದಲೂ ಪ್ರಸಸ್ತಿ ಸನ್ಮಾನ.
ಈ ಸಂದರ್ಭದಲ್ಲಿ ಇವರ ಕೆಲವು ಹಾಡುಗಳನ್ನು ಲೋಕಾರ್ಪಣೆ ಮಾಡಲಾಯಿತು.
೩) 2022 ರಲ್ಲಿ ಕೊಲ್ಲಂಗಾನದಲ್ಲಿ ಬ್ರಹ್ಮಶ್ರೀ ಗಣರಾಜ ಉಪಾಧ್ಯಾಯರಿಂದ ಸನ್ಮಾನ ಪಡೆದಿದ್ದಾರೆ.
ಈ ಸಂದರ್ಭಲ್ಲಿ ಇವರು ಬರೆದ ‘ವೀರ ವೀರೇಶ’ ಯಕ್ಷಗಾನ ಪ್ರಸಂಗ ಬಿಡುಗಡೆ ಆಯಿತು.
೪)ಕರ್ನಾಟಕ ಸಂಘ, ಅಂಧೇರಿ (ರಿ) ಹಾಗೂ ಚೆಂಬೂರು ಕರ್ನಾಟಕ ಸಂಘ (ರಿ) ಇವುಗಳ ಜಂಟಿ ಆಸರೆಯಲ್ಲಿ ಮುಂಬಯಿಯ ವಿವಿಧ ಕನ್ನಡ ಪರ ಸಂಘಟನೆಗಳ ಸಹಯೋಗದೊಂದಿಗೆ ಕುರ್ಲಾ ಬಂಟರ ಭವನದಲ್ಲಿ ಹೊರನಾಡ ಕನ್ನಡ ಸಂಭ್ರಮ ಕಾರ್ಯಕ್ರಮ ಏರ್ಪಡಿಸಿ ಗೌರವ ಸನ್ಮಾನ ಪತ್ರವನ್ನು ಕೊಡಮಾಡಲಾಗಿದೆ.
೫) ತಿರುವನಂತಪುರದಲ್ಲಿ ಎಡನೀರು
ಶ್ರೀಗಳ ದಿವ್ಯ ಹಸ್ತದಿoದ ‘ಸಾಹಿತ್ಯ ಕುವರ ಬಿರುದು ‘ಪ್ರಶಸ್ತಿ ದೊರೆತಿದೆ.
೬) ದೈವ ಪಂಜುರ್ಲಿ ವೇದಿಕೆ, ಸೀತಾಂಗೋಳಿ ಇಲ್ಲಿ ‘ಸಾಧಕರು’ ಎನ್ನುವ ನೆಲೆಯಲ್ಲಿ ಸನ್ಮಾನಿತರಾಗಿದ್ದಾರೆ.
೭) ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಕಾಸರಗೋಡು ವತಿಯಿಂದ ಸನ್ಮಾನ ಪಡೆದಿದ್ದಾರೆ.
೮) ಇವರು ಬರೆದ ‘ತ್ರಯಂಬಕ ವಿಲಾಸ’ ಹಾಗೂ ‘ವೀರ ವೀರೇಶ’ ಯಕ್ಷಗಾನ ಪ್ರಸಂಗಗಳು ಉಡುಪಿ, ಮಂಗಳೂರು, ಪುತ್ತೂರು, ಎರ್ನಾಕುಲಮ್ ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿವೆ.
೯) ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಕಾಸರಗೋಡು, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಭಾರತ್ ಭವನ ತಿರುವನಂತಪುರ, ಕೇರಳ ರಾಜ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಅನಂತಪುರಿ ಗಡಿನಾಡ ಸಾಂಸ್ಕೃತಿಕ ಉತ್ಸವ 2023ರ ಪ್ರಶಸ್ತಿ ಭಾಜನರಾಗಿದ್ದಾರೆ.
-
-
ಇವರ ಮಗಳು ಜಯಲಕ್ಷ್ಮಿ ಪ್ರಸಾದ್. ಇವಳು ‘ಬೆಳೆಯ ಸಿರಿ ಮೊಳಕೆಯಲ್ಲಿ’ ಎಂದು ಹೇಳುವ ಮಾತಿಗೆ ಒಳ್ಳೆಯ ಉದಾಹರಣೆ. ಇವಳು ಎರ್ನಾಕುಲಮ್ ಜಿಲ್ಲೆಯ ತಿರುವಾಣಿಯೂರಿನ ‘ಗ್ಲೋಬಲ್ ಸಾರ್ವಜನಿಕ ಶಾಲೆ’ಯಲ್ಲಿ 7ನೇ ತರಗತಿಯಲ್ಲಿ ಕಲಿತಾಗಿದೆ.
-
ಸಂಗೀತ, ಕಥಕ್ಕಳಿ, ನಾಟ್ಯ ತರಬೇತಿ ಪಡೆಯುತ್ತಾ ಇದ್ದಾಳೆ. ಇತ್ತೀಚೆಗೆ ಕಥಕ್ಕಳಿ ರಂಗಭೂಮಿಗೆ ಪ್ರವೇಶ ಆಗಿದೆ. ಮೂಲಡ್ಕ ಬಿ. ಉದನೇಶ್ವರ ಪ್ರಸಾದ್ ಈಗ ಎರ್ನಾಕುಲಮ್‌ನಲ್ಲಿ ನೆಲೆಸಿದ್ದು ಕೂತಾಟುಕುಲಮ್‌ನ ಶ್ರೀಧರೀಯಮ್ ಕಣ್ಣಿನ ಆಸ್ಪತ್ರೆಯ ನಿರ್ದೇಶಕರಾಗಿ ಕಾರ್ಯ ಪ್ರವೃತ್ತರಾಗಿದ್ದಾರೆ. ಇವರ ಸಾಹಿತ್ಯ ಕಲಾ ಸೇವೆ ನಿತ್ಯ ನಿರಂತರ ನಡೆಯಲಿ ಎಂಬುದಾಗಿ ನಾವೆಲ್ಲರೂ ಹಾರೈಸೋಣ.
-